ಅಸಂಬದ್ಧ ವ್ಯವಸ್ಥೆಗೆ ಉತ್ತರ: ರಘುಪತಿ ಭಟ್

rahupati bhat
ರಘುಪತಿ ಭಟ್, ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ
Published on

ಶಿವಮೊಗ್ಗ: ಬಿಜೆಪಿಯಲ್ಲಿನ ಅಸಂಬದ್ಧ ವ್ಯವಸ್ಥೆಗೆ ಉತ್ತರ ಸಿಗಬೇಕು ಎನ್ನುವ ದೃಷ್ಟಿಯಿಂದ ಪದವೀಧರ ಕ್ಷೇತ್ರಕ್ಕೆ ಸ್ಪರ್ಧಿಸಿದ್ದೇನೆ. ಆರಂಭದಲ್ಲಿ ಸ್ವಲ್ಪ ಗೊಂದಲವಿತ್ತು. ಈಗ ಎಲ್ಲ ಗೊಂದಲ ನಿವಾರಣೆಯಾಗಿದೆ. ಕ್ಷೇತ್ರದ ಮತದಾರರು ಬುದ್ದಿವಂತರಿದ್ದಾರೆ. ರಾಜಕೀಯಕ್ಕೆ ಖಂಡಿತವಾಗಿಯೂ ಹೊಸ ದಿಕ್ಕು ಸಿಗಲಿದೆ ಎಂದು ನೈಋತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ರಘುಪತಿ ಭಟ್ ವಿಶ್ವಾಸ ವ್ಯಕ್ತಪಡಿಸಿದರು.

ಕ್ಷೇತ್ರದಲ್ಲಿ ಒಂದು ಸುತ್ತು ಪ್ರವಾಸ ಮಾಡಿದ್ದೇನೆ. ಎಲ್ಲಡೆ ಸಹಕಾರ ಸಿಕ್ಕಿದೆ. ಮಲೆನಾಡಿನ ಜನರ ಪ್ರೀತಿಗೆ ಹೃದಯ ತುಂಬಿ ಬಂದಿದೆ. ನನ್ನ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ ಅವರ ನಂಬಿಕೆಗಳನ್ನು ಹುಸಿ ಮಾಡುವುದಿಲ್ಲ. ಕೆ.ಎಸ್.ಈಶ್ವರಪ್ಪ ಬೆಂಬಲ ನೀಡಿರುವುದು ಮತ್ತಷ್ಟು ಹುಮ್ಮಸ್ಸು ತಂದಿದೆ. ರಾಷ್ಟ್ರಭಕ್ತ ಹಿಂದುತ್ವವಾದಿಗಳು ಯಾವುದೇ ಪಕ್ಷದಲ್ಲಿದ್ದರೂ ನನಗೆ ಬೆಂಬಲ ನೀಡುತ್ತಾರೆ ಎಂದು ಹೇಳಿದರು.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕನಾಗಿ ಎಲ್ಲ ವರ್ಗದ ಜನರ ಆಶಯಕ್ಕೆ ಸ್ಪಂದಿಸಿದ್ದೇನೆ. ಪ್ರಾಮಾಣಿಕವಾಗಿ ಕೆಲಸ ಮಾಡಿ ಅಭಿವೃದ್ಧಿ ಮಾಡಿದ್ದೇನೆ. ಇದು ನನಗೆ ಸಹಾಯಕವಾಗುತ್ತದೆ. ಮುಂದೆಯೂ ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net