ಉತ್ತರದಲ್ಲಿ ಡಾ.ರವಿ ಪಾಟೀಲ ಮತಬೇಟೆ

aaa
Published on


ಬೆಳಗಾವಿ: ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ ಅವರು ಮಂಗಳವಾರ ನಗರದ ವಿವಿಧೆಡೆ ಚುನಾವಣಾ ಪ್ರಚಾರ ಕೈಗೊಂಡು, ಮತಯಾಚಿಸಿದರು.

ಕ್ಯಾಂಪ್ ಪ್ರದೇಶದ ಭಾವಸಾರ ಕ್ಷತ್ರಿಯ ಸಮಾಜದ ಮಾರುತಿ ಮಂದಿರದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯ ಆರಂಭಿಸಿದರು. ಕ್ಯಾಂಪ್ ಪ್ರದೇಶದಲ್ಲಿ ಸ್ವಚ್ಛತೆ ಸೌಂದರ್ಯೀಕರಣದ ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಕುಡಿಯುವ ನೀರು ಮತ್ತು ಮೂಲ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದರು.

ಭಾವಸಾರ ಕ್ಷತ್ರಿಯ ಸಮಾಜದಿಂದ ಡಾ.ರವಿ ಪಾಟೀಲ ಅವರನ್ನು ಸತ್ಕರಿಸಲಾಯಿತು. ಡಾ. ರವಿ ಪಾಟೀಲ ಮಾತನಾಡಿ, ಮತದಾರರು ತಮ್ಮ ಹಕ್ಕು ಚಲಾಯಿಸುವುದನ್ನು ಮರೆಯಬಾರದು. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದು ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು. ಪ್ರಚಾರ ಕಾರ್ಯದಲ್ಲಿ ಬೆಳಗಾವಿ ಉಪಮೇಯರ್ ರೇಷ್ಮಾ ಪಾಟೀಲ, ಕಿಶೋರ ಖೋಕಲೆ, ಸಂಜಯ ರಣಸುಬೆ, ಅಮುಲ್ ಬೇದ್ರೆ, ಶೇಷ ಜವಳಿಕರ, ಸುಧೀರ ತುಪೇಕರ್, ಸುನೀಲ ಜವಳಿ, ಮನೋಜ ಮಿರಜೇಕರ ಇತರರಿದ್ದರು.

ಡಾ.ರವಿ ಪಾಟೀಲ ಅವರ ಪತ್ನಿ ಸುನೀತಾ ಪಾಟೀಲ ಅವರೂ ಕಂಟೋನ್ಮೆಂಟ್‌ನಲ್ಲಿ ಪ್ರಚಾರ ಕಾರ್ಯ ಕೈಗೊಂಡರು. ಕರ್ನಾಟಕ ಮರಾಠಾ ಸಮಾಜ ವಿಕಾಸ ಮಂಡಳಿ ಮುಖ್ಯಸ್ಥ ಡಾ.ಎಂ.ಜಿ.ಮುರಳಿ ಪಾಲ್ಗೊಂಡಿದ್ದರು. ಡಾ.ಎಂ.ಜಿ.ಮುರಳಿ ಮಾತನಾಡಿ, ಬಿಜೆಪಿ ಮರಾಠಾ ಸಮುದಾಯದ ಅಭಿವೃದ್ಧಿಗೆ ಹಲವಾರು ಕಾರ್ಯ ಕೈಗೊಂಡಿದೆ.

ಕರ್ನಾಟಕ ಮರಾಠ ಸಮಾಜ ಅಭಿವೃದ್ಧಿ ಮಂಡಳಿಯಿಂದ ರೈತರು, ಯುವ ಜನತೆ, ವಿದ್ಯಾರ್ಥಿಗಳಿಗಾಗಿ ಬಹಳಷ್ಟು ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು. ವಿನಯ್ ಜಿ., ಎಚ್.ಬಿ. ಪಾಟೀಲ, ನಾಗರಾಜ ಕರ್ಪೂರ ಹಾಗೂ ಬಿಜೆಪಿಯ ನೂರಾರು ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net