ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿ, ತಾತ್ಸಾರ ಬೇಡ

18sgr4
ಸಾಗರದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಯೋಗಾಸನ ಮತ್ತು ಚೆಸ್ ಸ್ಪರ್ಧೆಯನ್ನು ಕೇತ್ರ ಶಿಕ್ಷಣಾಽಕಾರಿ ಪರಶುರಾಮಪ್ಪ ಉದ್ಘಾಟಿಸಿದರು. ಗುರುರಾಜ್, ಸ್ವಾಮಿ, ಪಾಟೀಲ್, ಮಂಜುಳಾ, ಶೋಭಾ ಇತರರಿದ್ದರು.
Published on

ಸಾಗರ: ಮಕ್ಕಳ ಪ್ರತಿಭೆಗೆ ಸೂಕ್ತ ಅವಕಾಶ ದೊರೆಯಬೇಕು. ಅವರ ಪ್ರಶ್ನೆಗಳಿಗೆ ಉತ್ತರ ನೀಡಬೇಕೆ ಹೊರತು ತಾತ್ಸಾರ ಮನೋಭಾವ ತೋರುವುದಲ್ಲ ಎಂದು ಕ್ಷೇತ್ರ ಶಿಕ್ಷಣಾಽಕಾರಿ ಪರಶುರಾಮಪ್ಪ ತಿಳಿಸಿದರು.

ನಗರದ ಅಜಿತ ಸಭಾಭವನದಲ್ಲಿ ಶುಕ್ರವಾರ ಕ್ಷೇತ್ರ ಶಿಕ್ಷಣಾಽಕಾರಿಗಳ ಕಚೇರಿ ಮತ್ತು ಸೇವಾಸಾಗರ ವಿದ್ಯಾಸಂಸ್ಥೆಯಿAದ ಆಯೋಜಿಸಿದ್ದ 14 ವರ್ಷದೊಳಗಿನ ಮಕ್ಕಳಿಗೆ ತಾಲೂಕು ಮಟ್ಟದ ಯೋಗಾಸನ ಮತ್ತು ಚೆಸ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, ಯೋಗ ಮತ್ತು ಚೆಸ್ ವಿಶ್ವಮಾನ್ಯತೆ ಪಡೆದ ಕ್ರೀಡೆಯಾಗಿದೆ. ನಿರಂತರ ಅಭ್ಯಾಸದಿಂದ ಯೋಗಾಸನ ಮತ್ತು ಚೆಸ್ ಕ್ರೀಡೆಯನ್ನು ತಮ್ಮದಾಗಿಸಿಕೊಳ್ಳಲು ಸಾಧ್ಯ. ಯೋಗಾಸನ ದೈಹಿಕವಾಗಿ ಸದೃಢಗೊಳಿಸಿದರೆ, ಚೆಸ್ ಮಾನಸಿಕವಾಗಿ ಗಟ್ಟಿಗೊಳಿಸುತ್ತದೆ. ವಿದ್ಯಾರ್ಥಿ ದೆಸೆಯಲ್ಲಿ ಪಠ್ಯದ ಜತೆಗೆ ಕ್ರೀಡೆಯಂತಹ ಚಟುವಟಿಕೆಯಲ್ಲಿ ಮಕ್ಕಳು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸೇವಾಸಾಗರ ವಿದ್ಯಾಸಂಸ್ಥೆ ನಿರ್ದೇಶಕ ರವೀಶ್ ಮಾತನಾಡಿ, ದೇಶಿಯತೆಗೆ ಪೂರಕವಾದ ಯೋಗ ಮತ್ತು ಚೆಸ್ ಮಹತ್ವದ ಕ್ರೀಡೆಗಳಾಗಿವೆ. ಮಕ್ಕಳು ಯೋಗ ಮತ್ತು ಚೆಸ್ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಪಾಲಕರು ಮಕ್ಕಳನ್ನು ಓದಿನ ವಾತಾವರಣಕ್ಕೆ ಸೀಮಿತಗೊಳಿಸದೆ ಜ್ಞಾನಾರ್ಜನೆಗೆ ಕ್ರೀಡೆ ಮತ್ತು ಇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಹಕರಿಸಬೇಕು ಎಂದರು.
ದೈಹಿಕ ಶಿಕ್ಷಣ ಪರಿವೀಕ್ಷಕ ಗುರುರಾಜ್, ಶಿಕ್ಷಣ ಸಂಯೋಜಕ ವಿ.ಟಿ.ಸ್ವಾಮಿ, ಎಂ.ಆರ್.ಪಾಟೀಲ್, ಮಂಜುಳಾ, ಶೋಭಾ, ಸದಾಶಿವಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net