

ರಾಯಚೂರು ಶಾಖೋತ್ಪನ್ನ ಘಟಕಗಳಲ್ಲಿ ತಾಂತ್ರಿಕ ದೋಷದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ರಾಜ್ಯದಲ್ಲಿ ಅಘೋಷಿತ ವಿದ್ಯುತ್ ಕಡಿತಕ್ಕೆ ಎಸ್ಕಾಂಗಳು ಮುಂದಾಗಿವೆ.
ತಾಲೂಕಿನ ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ನಾಲ್ಕು ಘಟಕಗಳು ತಾಂತ್ರಿಕ ಸಮಸ್ಯೆಯಿಂದ ಉತ್ಪಾದನೆ ಸ್ಥಗಿತಗೊಳಿಸಿದರೆ, ಇದೇ ಕಾರಣಕ್ಕೆ ವೈಟಿಪಿಎಸ್‌ನ ಎರಡನೇ ಘಟಕ ಸ್ಥಗಿತಗೊಂಡಿದೆ. ಪರಿಣಾಮ ಬೇಸಿಗೆಯಲ್ಲಿ ರಾಜ್ಯದ ಶೇ.೪೦ ಕ್ಕೂ ಹೆಚ್ಚಿನ ವಿದ್ಯುತ್ ಬೇಡಿಕೆ ನೀಗಿಸುವ ಥರ್ಮಲï ಘಟಕಗಳಿಂದ ಅಗತ್ಯ ವಿದ್ಯುತ್ ದೊರೆಯದಿರುವುದು ಪೂರೈಕೆ ಹಾಗೂ ಬೇಡಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಅಂತೆಯೇ ಸೋಮವಾರ ದಿನವಿಡೀ ರಾಜ್ಯದ ಅನೇಕ ಕಡೆ ವಿದ್ಯುತ್ ಪೂರೈಕೆಯಲ್ಲಿ ಆಗಾಗ್ಗೆ ವ್ಯತ್ಯಯವಾಯಿತು. ಕಳೆದ ಸುಮಾರು ದಿನಗಳಿಂದ ತಾಂತ್ರಿಕ ಸಮಸ್ಯೆಯಿಂದ ವಿದ್ಯುತ್ ಉತ್ಪಾದನೆ ಸ್ಥಗಿತ ಮಾಡಲಾಗಿದ್ದ ೦೪ ನೇ ಘಟಕದಲ್ಲಿಯೂ ಪರಿವರ್ತಕದಲ್ಲಿ ಕಾಣಿಸಿಕೊಂಡ ಭಾರೀ ಬೆಂಕಿಯಿAದು ಸುಟ್ಟು ಹೋಗಿದೆ.
ಇದರಿಂದ ಬಿರುಬಿಸಿಲಿನ ದಿನಗಳಲ್ಲಿ ವಿದ್ಯುತ್‌ನ ಅಘೋಷಿತ ಕಡಿತದಿಂದ ಗ್ರಾಹಕರು ಪರದಾಡಿದರು.
ಕಳೆದ ವಾರ ಆರ್‌ಟಿಪಿಎಸ್‌ನ ೩ ಮತ್ತು ಬಿಟಿಪಿಎಸ್ ನ ೧ ಘಟಕ ಬಂದ್ ಆಗಿತ್ತು. ಆದರೆ ಸೋಮವಾರ ಬೆಳಗ್ಗೆ ವೇಳೆಗೆ ಶಕ್ತಿನಗರದಲ್ಲಿ ಎರಡನೇ ಘಟಕವೂ ದುರಸ್ತಿಗೀಡಾಗಿದ್ದರಿಂದ ಉತ್ಪಾದನೆ ಸ್ತಗಿತಗೊಳಿಸಿ ಒಟ್ಟು ನಾಲ್ಕು ಘಟಕಗಳು ಬಂದ್ ಆದರೆ ವೈಟಿಪಿಎಸ್‌ನಲ್ಲಿ ಬಾಯ್ಲರ್ ಟ್ಯೂಬï ಸೋರಿಕೆಯಿಂದ ಅಂತ ಎರಡನೇ ಘಟಕ ಬಂದ್ ಅಗಿದ್ದರಿಂದ ವಿದ್ಯುತ್‌ಉತ್ಪಾದನೆ ಸ್ಥಗಿತಗೊಂಡಿದ್ದರಿAದ ರಾಜ್ಯದ ಶಾಖೋತ್ಪನ್ನ ಘಟಕಗಳ ಒಟ್ಟು ಸಾಮರ್ಥ್ಯವು ೫೦೨೦ ಮೆವಾ ಆಗಿದ್ದರೆ ಕೇವಲ ೨೩೦೦ ಮೆವಾ ನಷ್ಟು ಮಾತ್ರ ಉತ್ಪಾದನೆಯಾಗುತ್ತಿತ್ತು. ಇದರಿಂದಾಗಿ ಎಸ್ಕಾಂ ಗಳು ಸೋಮವಾರ ದಿನವಿಡೀ ವಿದ್ಯುತï ಬೇಡಿಕೆ ನಿಭಾಯಿಸಲು ವಿದ್ಯುತ್ ಕಡಿತದ ಮೊರೆ ಹೋಗುವಂತಾಯಿತು.