ಜನರ ಸೇವೆಗೆ ಮತ್ತೊಬ್ಬ ಸೋಮಣ್ಣ ಬರಲ್ಲ

asd
Published on

ನೊಣವಿನಕೆರೆ: ತಿಪಟೂರು ತಾಲೂಕು ನೊಣವಿನಕೆರೆಯ ಶ್ರೀ ಕಾಡಸಿದ್ದೇಶ್ವರ ಮಠಕ್ಕೆ ಗುರುವಾರ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭೇಟಿ ನೀಡಿ ಶ್ರೀ ಕಾಡಸಿದ್ದೇಶ್ವರ ಗದ್ದುಗೆಗೆ ಕಿರಿಯ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅರ್ಚನೆ, ಸಂಕಲ್ಪ ಮೂಲಕ ವಿಶೇಷ ಪೂಜೆ ಸಲ್ಲಿಸಿದರು.

ಗುರುಭವನದಲ್ಲಿ ಮಾತನಾಡಿದ ಸೋಮಣ್ಣ, ಶ್ರೀ ಮಠ ಹಾಗೂ ಪೀಠದ ಅಜ್ಜಯ್ಯನ ಆಶೀರ್ವಾದದಿಂದ ರಾಜಕೀಯವಾಗಿ, ವೈಯಕ್ತಿಕವಾಗಿ ಬಂದ ಕಷ್ಟಗಳನ್ನು ಎದುರಿಸಿ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಪಕ್ಷತಿತವಾಗಿ ಡಿ.ಕೆ.ಶಿವಕುಮಾರ್​, ಚಲುವರಾಯಸ್ವಾಮಿ ಮತ್ತು ನಾನು ಮೂವರು ಶ್ರೀ ಮಠದ ಭಕ್ತರು ಎಂಬುದಕ್ಕಿಂತ ಮಕ್ಕಳಾಗಿ ಶ್ರೀಮಠ ಮತ್ತು ಪೀಠದ ಅಜ್ಜಯ್ಯ ನೀಡುವ ಸಲಹೆ, ಸೂಚನೆ, ಮಾರ್ಗದರ್ಶನದಲ್ಲಿ ನಡೆದು ಈ ಮಟ್ಟಕ್ಕೆ ಬಂದಿದ್ದೇವೆ ಎಂದರು.

ಗ್ರಾಮ ದೇವತೆ ಶ್ರೀ ಉಡಿಸಲಕೆಂಪಮ್ಮ ದೇವಸ್ಥಾನಕ್ಕೂ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಈ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ, ಜೆಡಿಎಸ್​ ಕಾರ್ಯಕರ್ತರು, ದೇವಸ್ಥಾನ, ಕಮಿಟಿಯವರು, ಗ್ರಾಮಸ್ಥರು ಸ್ವಾಗತಿಸಿದರು.

ಗ್ರಾಮಸ್ಥರ ಮನವಿ ಸ್ವೀಕರಿಸಿ ಮಾತನಾಡಿ, ನನ್ನ ಅಧಿಕಾರ ಅವಧಿಯಲ್ಲಿ ಜನರ ಸೇವೆ ಮೂಲಕ ಮತ್ತೊಬ್ಬ ಸೋಮಣ್ಣ ಬರದಂತೆ ಸೋಮಣ್ಣನಿಗೆ ಸೋಮಣ್ಣನೇ ಸಾಟಿ ಎಂಬಂತೆ ೇತ್ರದ ಜನರಿಗೆ ಸಹಕಾರ ನೀಡುವ ಉದ್ದೇಶ ಹೊಂದಿದ್ದೇನೆ. ಮುಂದಿನ ಲೋಕಸಭಾ ಅಧಿವೇಶನ ಮುಗಿದ ನಂತರ ತುಮಕೂರು ಲೋಕಸಭಾ ೇತ್ರ ಸೇರಿ ತಿಪಟೂರು ತಾಲೂಕಿನ ಎಲ್ಲ ಹೋಬಳಿ, ಪಂಚಾಯಿತಿ ಮಟ್ಟದಲ್ಲಿ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಆರೋಗ್ಯ, ಶಿಕ್ಷಣ ಸೇರಿದಂತೆ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಬಡ ಮತ್ತು ಕೆಳ ವರ್ಗದ ಜನರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ ಎಂದರು.

ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುವ ಜತೆಗೆ ಅಟಲ್​ ಬಿಹಾರಿ ವಾಜಪೇಯಿ ಮತ್ತು ಎಲ್​.ಕೆ. ಆಡ್ವಾಣಿ ಜತೆಗೆ ಜೈಲುವಾಸ ಅನುಭಸಿದ್ದ ಬಿಜೆಪಿ ಹಿರಿಯ ಮುಖಂಡ ದಿ.ಕಾಬೋರಪ್ಪ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿ ಮುಂದಿನ ದಿನಗಳಲ್ಲಿ ಸಮಾಧಿಯನ್ನು ಅಭಿವೃದ್ಧಿ ಪಡಿಸುವ ಭರವಸೆ ನೀಡಿದರು.

ಮಾಜಿ ಸಂಸದ ಜಿ.ಎಸ್​.ಬಸವರಾಜು, ಮಾಜಿ ಶಾಸಕ ಬಿ.ನಂಜಾಮರಿ, ತಹಸೀಲ್ದಾರ್​ ಎಸ್​.ಪವನ್​ ಕುಮಾರ್​, ಡಿವೈಎಸ್​ಪಿ ವಿನಾಯಕ ಶಟಗೇರಿ, ಶ್ರೀ ಮಠದ ಆಡಳಿತ ಮಂಡಳಿಯ ಶಂಭು. ಜಿ. ಮಠ್​, ಉಡಿಸಲಕೆಂಪಮ್ಮ ದೇವಸ್ಥಾನ ಕನ್ವಿನಿಯರ್​ ಬಸವರಾಜು, ಗ್ರಾಪಂ ಸದಸ್ಯರು ಹಾಗೂ ಬಿಜೆಪಿ, ಜೆಡಿಎಸ್​ ಕಾರ್ಯಕರ್ತರು ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net