ಮಕ್ಕಳ ಆಹಾರ ಕಳವು ಪ್ರಕರಣದಲ್ಲಿ ಮತ್ತಾರು ಬಂಧನ

crime
Published on

ಹುಬ್ಬಳ್ಳಿ: ಅಂಗನವಾಡಿಗಳಿಗೆ ಪೂರೈಕೆಯಾಗುತ್ತಿದ್ದ ಪೌಷ್ಟಿಕ ಆಹಾರ ಅಕ್ರಮ ದಾಸ್ತಾನು ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಆರು ಜನರನ್ನು ಇಲ್ಲಿಯ ಕಸಬಾಪೇಟ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸೋನಿಯಾಗಾಂಧಿ ನಗರದ ಅಲ್ತಾಫ ಕಲಾದಗಿ, ಬಂಕಾಪುರ ಚೌಕ್‌ನ ದಾದಾಪೀರ ಚೌಧರಿ, ಬಸವರಾಜ ವಾಲ್ಮೀಕಿ, ಉದಯನಗರದ ಸಲೀಂ ಬೇಪಾರಿ, ಸಲೀಂಶೇಖ್, ಯಲ್ಲಾಪುರ ಓಣಿಯ ಸಲೀಂ ಅತ್ತಾರ ಬಂಧಿತರು. ಇವರೆಲ್ಲ ಪ್ರಮುಖ ಆರೋಪಿಗಳಾದ ಬತುಲ್ ಕಿಲ್ಲೇದಾರ ಹಾಗೂ ಫಾರುಕ್ ಶೇಖ್ ಪರಾರಿಯಾಗಲು ಸಹಕರಿಸಿದವರು. ಈಗಾಗಲೇ ಒಟ್ಟು 26 ಜನರನ್ನು ಪೊಲೀಸರು ಬಂಧಿಸಿದ್ದರು. ಈಗ ಮತ್ತೆ 6 ಜನರನ್ನು ಬಂಧಿಸಿದ್ದು, ಈ ಸಂಖ್ಯೆ 32ಕ್ಕೇರಿದೆ.

ಫೆ. 15ರಂದು ಮಧ್ಯಾಹ್ನ 4.30ಕ್ಕೆ ಬಂದ ಖಚಿತ ಮಾಹಿತಿ ಮೇರೆಗೆ ಕಂದಾಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಗಬ್ಬೂರು ಬಳಿಯ ಗೋೀದಾಮಿನ ಮೇಲೆ ದಾಳಿ ಮಾಡಲಾಗಿತ್ತು. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರೂಪಣಾಧಿಕಾರಿ ಕಮಲವ್ವ ಬೈಲೂರ, ಕಸಬಾಪೇಟ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net