

ಬೆಂಗಳೂರು: ಮೊದಲನೇ ವರ್ಷದ ಎಂಬಿಎ, ಎಂಸಿಎ, ಎಂ.ಇ., ಎಂ.ಟೆಕ್ ಮತ್ತು ಎಂ.ಆರ್ಕ್ ಕೋರ್ಸುಗಳಿಗೆ ಪ್ರವೇಶ ಬಯಸಿರುವ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿ ನಮೂದಿಸಿರುವ ಜಾತಿ/ಆದಾಯ/ಕಲ್ಯಾಣ ಕರ್ನಾಟಕ ಪ್ರಮಾಣ ಪತ್ರಗಳ ಆರ್.ಡಿ. ಸಂಖ್ಯೆಯ ಪರಿಶೀಲನೆ ಸಮಯದಲ್ಲಿ ಲೋಪ ಕಂಡುಬಂದಿರುವಂತಹ ಅಭ್ಯರ್ಥಿಗಳು ಇದನ್ನು ಸರಿಪಡಿಸಿಕೊಳ್ಳಲು ನ.೨೪ರ ಸಂಜೆ ೪ ಗಂಟೆಯಿಂದ ನ.೨೭ರ ಬೆಳಿಗ್ಗೆ ೧೦ ಗಂಟೆಯವರೆಗೆ ಅವಕಾಶ ಕೊಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.
ನಮೂದಿತ ಆರ್.ಡಿ. ಸಂಖ್ಯೆಯನ್ನು ಕಂದಾಯ ಇಲಾಖೆಯಲ್ಲಿರುವ ಇದೇ ಸಂಖ್ಯೆಯ ಜತೆ ಪರಿಶೀಲಿಸಿದಾಗ ಯಾವ ಅಭ್ಯರ್ಥಿಗಳ ಅರ್ಜಿಗಳಲ್ಲಿ ಲೋಪ ಕಂಡುಬಂದಿದೆಯೋ ಅಂತಹವರ ಹೆಸರುಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ (ಠಿಠಿ://ಛಿ.ಚ್ಟ.್ಞಜ್ಚಿ.ಜ್ಞಿ) ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಇದನ್ನು ಗಮನಿಸಬೇಕು ಎಂದು ಕೋರಿದ್ದಾರೆ.
ಜತೆಗೆ, ಮೇಲ್ಕಂಡ ಕೋರ್ಸುಗಳಿಗೆ ಎ ಮತ್ತು ಎನ್ ಕಂಡಿಕೆಗಳ ಅಡಿಯಲ್ಲಿ ಪ್ರವೇಶ ಬಯಸಿರುವ ಅಭ್ಯರ್ಥಿಗಳು ಒಂದು ವೇಳೆ ಗೇಟ್ ಅರ್ಹತಾ ಅಭ್ಯರ್ಥಿಗಳಾಗಿದ್ದಲ್ಲಿ ಅಥವಾ ಪಾರ್ಟ್ ಟೈಮ್ ಪ್ರವೇಶ ಕೋರಿದ್ದಲ್ಲಿ ಮತ್ತು ಪ್ರಾಯೋಜಿತ ಕೋಟಾ (ಸ್ಪಾನ್ಸರ್ ಕೋಟಾ) ಅಭ್ಯರ್ಥಿಗಳಾಗಿದ್ದ ಪಕ್ಷದಲ್ಲಿ ದಾಖಲೆಗಳ ಪರಿಶೀಲನೆಗೆ ಖುದ್ದಾಗಿ ಪ್ರಾಧಿಕಾರಕ್ಕೆ ಹಾಜರಾಗಬೇಕು. ಇಂಥವರು ಸದ್ಯಕ್ಕೆ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ವೆರಿಫಿಕೇಶನ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ದಾಖಲೆಗಳ ಪರಿಶೀಲನೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.
ಪಿಜಿ ವೈದ್ಯಕೀಯ/ದಂತ ವೈದ್ಯಕೀಯ
ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳಲ್ಲಿ ಖಾಲಿ ಉಳಿದಿರುವ ಸೀಟುಗಳ ಹಂಚಿಕೆಗಾಗಿ ನ.೨೯ರಂದು ವಿಶೇಷ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆ ನಡೆಸಲಾಗುವುದು. ಪಿ.ಜಿ.ನೀಟ್ ಪರೀಕ್ಷೆಯಲ್ಲಿ ಅರ್ಹರಾಗಿದ್ದು, ಇದುವರೆಗೂ ಸೀಟು ಪಡೆಯದೆ ಇರುವ ಆಸಕ್ತ ಅಭ್ಯರ್ಥಿಗಳು ನಿಗದಿತ ಮಾನದಂಡಗಳನ್ನು ಪೂರೈಸುವ ಮೂಲಕ ಇದರಲ್ಲಿ ಭಾಗವಹಿಸಬಹುದು. ಉಳಿದ ವಿವರಗಳಿಗೆ ಪ್ರಾಧಿಕಾರದ ವೆಬ್‌ಸೈಟ್ ನೋಡಬಹುದು ಎಂದು.