ಅರಣ್ಯವಾಸಿಗಳಿಗೆ ಮತ್ತೆ ನೋಟಿಸ್‌

notice for forest dwellers
Published on

ಸಿದ್ದಾಪುರ: ಅನಾದಿಕಾಲದಿಂದ ಸಾಗುವಳಿ ಮಾಡುತಿದ್ದು, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಲ್ಲಿಸಿದ ಅರ್ಜಿ ಮಂಜೂರಿಗೆ ಸಂಬಂಧಪಟ್ಟಂತೆ  ವಿಚಾರಣೆ ಹಂತದಲ್ಲಿ ಇರುವ ಸಂದರ್ಭದಲ್ಲಿ ಅರಣ್ಯವಾಸಿಗಳಿಗೆ ಅರಣ್ಯ ಕಾಯಿದೆ ಅಡಿಯಲ್ಲಿ ಒಕ್ಕಲೆಬ್ಬೀಸುವ ಪ್ರಕ್ರಿಯೆಗೆ ಕಾನೂನು ಬದ್ಧ ಪ್ರಾಧಿಕಾರದ ಮೂಲಕ ವಿಚಾರಣಾ ನೋಟಿಸ್ ನೀಡುತ್ತಿರುವುದು ಅರಣ್ಯವಾಸಿಗಳಿಗೆ ಆತಂಕ ಮತ್ತು ಮಾನಸಿಕ ಕಿರಿಕಿರಿ ಉಂಟಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.

ಸಿದ್ದಾಪುರದ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ನ್ಯಾಯಾಲಯದ ಪ್ರಾಧಿಕಾರದಿಂದ ಕ್ಯಾದಗಿ ವ್ಯಾಪ್ತಿಯಲ್ಲಿ ಬಿಳೂಮನೆ ಹಳ್ಳಿಯ ಅರಣ್ಯವಾಸಿ ಕನ್ನಾ ಪುಟ್ಟಾ ನಾಯ್ಕ  ಮತ್ತು ಕನ್ನಾ ಮಾರ್ಯ ನಾಯ್ಕ  ಇನ್ನಿತತರಿಗೆ ಒಕ್ಕಲೆಬ್ಬಿಸುವ ಪ್ರಕ್ರಿಯೆ ನೋಟಿಸ್‌ಗಳು ಜಾರಿಯಾಗಿದ್ದು ಜುಲೈ ೩ ರಂದು  ಪ್ರಾಧಿಕಾರದ ನ್ಯಾಯಾಲಯಕ್ಕೆ ಹಾಜರಿರುವಂತೆ ನೋಟಿಸ್ ನೀಡಿದಾರೆಂದು ಅವರು ತಿಳಿಸಿದ್ದಾರೆ.

   ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಅರಣ್ಯವಾಸಿಯ ಅರ್ಜಿಗೆ ಸಂಬಂಧಿಸಿ ಮಾನ್ಯತೆ ಮತ್ತು ಪರಿಶೀಲನಾ ಪ್ರಕ್ರಿಯೆಯೂ ಪೂರ್ಣ ಆಗುವವರೆಗೆ ಸಾಗುವಳಿ ಅರಣ್ಯ ಭೂಮಿ ಅರಣ್ಯವಾಸಿಗಳನ್ನು ಒಕ್ಕಲೇಬ್ಬಿಸತಕ್ಕದ್ದಲ್ಲ ಅಥವಾ ಹೊರಹಾಕ ತಕ್ಕದ್ದಲ್ಲ ಎಂಬ ಸ್ಪಷ್ಟ ಅಂಶ ಕಾನೂನಿನಲ್ಲಿ ಉಲ್ಲೇಖವಿದ್ದಾಗಲೂ, ಒಕ್ಕಲೇಬ್ಬಿಸುವ ಅರಣ್ಯ ಇಲಾಖೆ ವಿಚಾರಣೆ ನೋಟಿಸ್ ನೀಡುತ್ತಿರುವುದು ಖೇದಕರವೆೆಂದು ಅವರು ಅರಣ್ಯ ಇಲಾಖೆಯ ಕ್ರಮವನ್ನು ಆಕ್ಷೇಪಿಸಿದ್ದಾರೆ.

  ಸಾಗುವಳಿ ಕ್ಷೇತ್ರದಲ್ಲಿ 30 ರಿಂದ 35 ವರ್ಷದ ತೆಂಗು, ಅಡಿಕೆ ಮರ, ಬಾಳೆ ಹಣ್ಣು ಹಂಪಲ ಭತ್ತ, ಬೇಸಾಯ ಮಾಡುತ್ತಾ ಜೀವನ ನಿರ್ವಹಿಸುವಂತಹ ಸಂದರ್ಭದಲ್ಲಿ ಒಕ್ಕಲೇಬ್ಬೀಸುವ ಪ್ರಕ್ರಿಯೆ ನೋಟಿಸ್ ಜಾರಿಯಾಗಿರುವುದರಿಂದ ಅರಣ್ಯವಾಸಿಗಳು ಆತಂತಕ್ಕೆ ಒಳಗಾಗಿದ್ದಲ್ಲದೇ, ಮಾನಸಿಕ ಕಿರುಕುಳಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ಸರ್ಕಾರದ ಆದೇಶದ ಉಲ್ಲಂಘನೆ:

ರಾಜ್ಯ ಸರ್ಕಾರ ಈ ಹಿಂದೆ ಅರಣ್ಯವಾಸಿಯ ಒಟ್ಟು ಸಾಗುವಳಿ ಕ್ಷೇತ್ರ 3 ಕ್ಕಿಂತ ಎಕರೆ ಕಡಿಮೆ ಇರುವ ಒತ್ತುವರಿದಾರರನ್ನು ಮುಂದಿನ ಸೂಚನೆವರೆಗೆ ಒಕ್ಕಲೇಬ್ಬಿಸಬಾರದೆಂದು ಸಾಮಾಜಿಕ ಚಿಂತಕ ಕಾಗೋಡ ತಿಮ್ಮಪ್ಪರವರು ಸಭಾದ್ಯಕ್ಷರಿರುವ ಸಂದರ್ಭದಲ್ಲಿ  ಮಾಡಿದ ಸರ್ಕಾರದ ಆದೇಶವನ್ನು ಉಲ್ಲಂಘಿಂಸಿ, ಒಕ್ಕಲೆಬ್ಬಿಸುವ ಪ್ರಕ್ರಿಯೆ ಜರುಗುತ್ತಿರುವುದು ಖಂಡನಾರ್ಹವೆAದು ಅಧ್ಯಕ್ಷ ರವೀಂದ್ರ ನಾಯ್ಕ ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net