

ಮೈಸೂರು: ಕೇಂದ್ರ ಹಾಗೂ ಬೇರೆ ರಾಜ್ಯಗಳೊಂದಿಗೆ ಪತ್ರ ವ್ಯವಹಾರ ನಡೆಸುವ ಸಂದರ್ಭ ಇಂಗ್ಲಿಷ್‌ನಲ್ಲಿ ಸಹಿ ಮಾಡುತ್ತೇನೆ, ಉಳಿದ ಸಂದರ್ಭದಲ್ಲಿ ಕನ್ನಡದಲ್ಲಿಯೇ ಸಹಿ ಮಾಡುತ್ತೇನೆ. ಅವನು ಯಾವನೋ ಒಬ್ಬ ಈ ವಿಚಾರವಾಗಿ ರಾಜ್ಯಪಾಲರಿಗೆ ದೂರು ನೀಡಿದ್ದಾನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ವತಿಯಿ ಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ‘ಕರ್ನಾಟಕ’ ನಾಮಕರಣದ ಸುವರ್ಣ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ‘ಕರ್ನಾಟಕ ಸಾಂಸ್ಕೃತಿಕ ಮುನ್ನೋಟ : ಚಿಂತನಾ ಸಮಾವೇಶ’ದಲ್ಲಿ ಮಾತನಾಡಿದರು.
ನಾನು ಕನ್ನಡ ಕನ್ನಡ ಕಾವಲು ಸಮಿತಿ (ಪ್ರಸ್ತುತ ಕನ್ನಡ ಅಭಿವೃದ್ಧಿ ಪ್ರಾಧಿಕಾರ) ಅಧ್ಯಕ್ಷನಾದ ನಂತರ ಕನ್ನಡದಲ್ಲಿ ಬರೆಯಲು ಪ್ರಾರಂ ಭಿಸಿದೆ, ಈಗ ನನಗೆ ಇಂಗ್ಲಿಷೇ ಮರೆತು ಹೋಗಿದೆ. ನಾನು ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಸಹಿ ಮಾಡುತ್ತೇನೆ. ‘ಸಿದ್ದರಾಮಯ್ಯ ಯಾವಾಗಲೂ ಕನ್ನಡದಲ್ಲಿ ಸಹಿ ಮಾಡುತ್ತಾರೆ. ಆದರೆ, ಅವರು ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಇಂಗ್ಲಿಷ್‌ನಲ್ಲಿ ಸಹಿ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ರಾಜ್ಯಪಾಲರಿಗೆ ಯಾವನೋ ಒಬ್ಬ ದೂರು ನೀಡಿದ್ದಾನೆ. ಎಂತಹ ಪೆದ್ದರು ಇದ್ದಾರೆ ನೋಡಿ, ಇದಕ್ಕೆ ಏನು ಹೇಳಬೇಕು ಹೇಳಿ? ಎಂದು ಪ್ರಶ್ನಿಸಿದರು.
‘ಈ ವಿಚಾರವಾಗಿ ಏಕೆ ತನಿಖೆ ಮಾಡಬಾರದು’ ಎಂದು ಪ್ರಶ್ನಿಸಿ ರಾಜ್ಯಪಾಲರು ನನಗೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ನೋಡಿದ್ದಾರೆ. ಈ ವಿಚಾರವನ್ನು ತಮಾಷೆಗಾಗಿ ನಿಮಗೆ ಹೇಳಿದೆ. ನಾನು ನಾನು ಕನ್ನಡ ಕನ್ನಡ ಕಾವಲು ಸಮಿತಿ ಅಧ್ಯಕ್ಷನಾ ದಲ್ಲಿಂದಲೂ ಕನ್ನಡಕ್ಕೆ ಒತ್ತು ನೀಡುತ್ತಾ ಬರುತ್ತಿದ್ದೇನೆ. ಆದರೆ, ಸಹಿ ಮಾಡುವಾಗ ಕನ್ನಡ ಹಾಗೂ ಇಂಗ್ಲಿಷ್ ಎರಡನ್ನೂ ಬಳಕೆ ಮಾಡುತ್ತೇನೆ ಎಂದರು.