ರಾಜ್ಯದಲ್ಲಿ ಮತ್ತೊಂದು ಮದ್ವೆ ದಿಬ್ಬಣದ ವಾಹನ ಅಪಘಾತ; 20ಕ್ಕೂ ಅಧಿಕ ಜನರಿದ್ದ ಟೆಂಪೊ ಪಲ್ಟಿ..

Accident
ಪಲ್ಟಿಯಾದ ಟೆಂಪೊ
Published on

ಉತ್ತರಕನ್ನಡ: ಮೂರು ದಿನಗಳ ಹಿಂದೆ ಮದುವೆ ದಿಬ್ಬಣದ ವಾಹನವೊಂದು ಮರಕ್ಕೆ ಡಿಕ್ಕಿ ಹೊಡೆದು ಒಟ್ಟು ಹತ್ತು ಜನರು ಸಾವಿಗೀಡಾಗಿದ್ದು, ಇನ್ನೂ ಕೆಲವರು ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ರಾಜ್ಯದಲ್ಲಿ ಮತ್ತೊಂದು ಮದುವೆ ದಿಬ್ಬಣದ ವಾಹನವೊಂದು ಅಪಘಾತಕ್ಕೀಡಾಗಿದೆ.

ಉತ್ತರಕನ್ನಡ ಜಿಲ್ಲೆಯ ಕುಮಟಾದ ಬಾಡ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಮದುವೆ ದಿಬ್ಬಣ ಹೊರಟಿದ್ದ ಟೆಂಪೊ ಪಲ್ಟಿಯಾಗಿದ್ದು, ಇದರಲ್ಲಿದ್ದ 20ಕ್ಕೂ ಅಧಿಕ ಜನರಿಗೆ ಗಾಯಗಳಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮದುವೆ ದಿಬ್ಬಣದ ಈ ಟೆಂಪೊ ಕುಮಟಾದಿಂದ ಅಘನಾಶಿನಿ ಕಡೆ ತೆರಳುತಿತ್ತು. ಅತಿವೇಗದಿಂದಾಗಿ ಟೆಂಪೋ ಪಲ್ಟಿಯಾಗಿದೆ ಎನ್ನಲಾಗಿದ್ದು, ಗಾಯಾಳುಗಳಿಗೆ ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭಿರವಾಗಿ ಗಾಯಗೊಂಡವರನ್ನು ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಕುಮಟಾ-ಹೊನ್ನಾವರ ಶಾಸಕ ಕೆ.ದಿನಕರ ಶೆಟ್ಟಿ ಗಾಯಾಳುಗಳನ್ನು ಭೇಟಿಯಾಗಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಕುಮಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net