ವಿಐಎಸ್‌ಎಲ್ ಆವರಣದಲ್ಲಿ ಮತ್ತೊಂದು ಚಿರತೆ

28bdvt3
ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಬುಧವಾರ ರಾತ್ರಿ ಕಾಣಿಸಿಕೊಂಡ ಚಿರತೆ.
Published on

ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆ ಒಳ ಆವರಣದಲ್ಲಿ ಬುಧವಾರ ರಾತ್ರಿಯೂ ಚಿರತೆಯೊಂದು ಪ್ರತ್ಯಕ್ಷವಾಗಿದೆ. ರಾತ್ರಿ ಕಾವಲುಗಾರರು ಕಾರ್ಖಾನೆಯ ಒಳಗಡೆ ಗಸ್ತು ತಿರುಗುತ್ತಿದ್ದಾಗ ಚಿರತೆ ಜೀಪಿಗೆ ಅಡ್ಡ ಬಂದಿದೆ.

ಮಂಗಳವಾರ ರಾತ್ರಿ ಬೋನಿಗೆ ಬಿದ್ದಿದ್ದ ಚಿರತೆ ಮರಿಯನ್ನು ಬೋನಿನಲ್ಲಿ ಹಾಗೆಯೇ ಬಿಟ್ಟಿರುವುದರಿಂದ ಅದನ್ನು ಹುಡುಕಿಕೊಂಡು ಈ ಚಿರತೆ ಬಂದಿರಬಹುದು ಎನ್ನಲಾಗಿದೆ.
ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net