

ಹುಬ್ಬಳ್ಳಿ: ಹಂತಕ ವಿಶ್ವನಾಥ ಅಲಿಯಾಸ್ ಗಿರೀಶ ಸಾವಂತ ವಿರುದ್ಧ ಶುಕ್ರವಾರ ಇಲ್ಲಿಯ ಬೆಂಡಿಗೇರಿ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಆರು ತಿಂಗಳ ಹಿಂದೆ ಯುವತಿಯನ್ನು ಪರಿಚಯಿಸಿಕೊಂಡಿದ್ದ ಗಿರೀಶ, ಆಕೆಯಿಂದ ಚಿನ್ನ ಹಾಗೂ ನಗದು ಪಡೆದಿದ್ದ. ಐದೂವರೆ ತೊಲೆ ಬಂಗಾರ ಹಾಗೂ 8 ಸಾವಿರ ರೂ. ನನಗೆ ತೊಂದರೆ ಇದೆ ಎಂದು ಪಡೆದಿದ್ದ ಗಿರೀಶ, ಮರಳಿ ಕೇಳಿದ್ದಕ್ಕೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇನ್ನೂ ಬಂಗಾರ, ಹಣ ತೆಗೆದುಕೊಂಡು ಬಾ ಎಂದು ಯುವತಿಗೆ ಪೀಡಿಸುತ್ತಿದ್ದ. ಈ ಕುರಿತು ಬೆಂಡಿಗೇರಿ ಠಾಣೆಗೆ 6 ತಿಂಗಳ ಹಿಂದೆ ದೂರು ನೀಡಲು ಹೋದಾಗ ಪಡೆದಿದ್ದಲ್ಲ. ಶುಕ್ರವಾರ ಕೊಟ್ಟಿದ್ದೇವೆ ದೂರು ಸ್ವೀಕರಿಸಿದ್ದಾರೆ ಎಂದು ವಂಚನೆಗೆ ಒಳಗಾದ ವಿಜಯಲಕ್ಷ್ಮೀ ಮಡಿವಾಳರ, ಸುದ್ದಿಗಾರರ ಮುಂದೆ ವಿವರಿಸಿದರು.
ಬೆಂಡಿಗೇರಿ ಠಾಣೆಯಲ್ಲಿ 420, 504, 506 ಐಪಿಸಿ ಸೆಕ್ಷನ್ ಅನ್ವಯ ವಿಶ್ವನಾಥ ಅಲಿಯಾಸ್ ಗಿರೀಶ ಸಾವಂತ ವಿರುದ್ಧ ದೂರು ದಾಖಲಾಗಿದೆ.