ಮತ್ತೊಂದು ಚರ್ಚೆಗೆ ಗ್ರಾಸವಾದ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕರ ಪುತ್ರನ ಆರತಕ್ಷತೆ

PT Parameshwara Naik
Published on

ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕರ ಪುತ್ರನ ಮದುವೆ ಮತ್ತಷ್ಟು ಚರ್ಚೆಗಳಿಗೆ ಗ್ರಾಸವಾಗಿದೆ. ಸಾಮಾಜಿಕ ಅಂತರವಿಲ್ಲದೆ ಮತ್ತು ಹೆಚ್ಚು ಜನ ಸೇರಿದ್ದ ವಿಷಯ ಈಗಾಗಲೆ ಚರ್ಚೆಯಲ್ಲಿದೆ. ಈಗ ಕ್ವಾರಂಟೈನ್ ವಿಷಯ ಮುನ್ನೆಲೆಗೆ ಬಂದಿದೆ. ಪಿಟಿಪಿ ಪುತ್ರ, ಹೈದರಾಬಾದ್ ಮೂಲದ ಯುವತಿಯನ್ನು ವರಿಸಿದ್ದಾರೆ. ಹೀಗಾಗಿ ಅಲ್ಲಿಂದ ಹೆಚ್ಚಿನ ಸಂಖ್ಯೆ ಜನ ಬಂದಿದ್ದರು ಎಂದು ಹೇಳಲಾಗಿದೆ. ಕರೊನಾ ಮುಂಜಾಗ್ರತಾ ಕ್ರಮವಾಗಿ ಅಂತಾರಾಜ್ಯದಿಂದ ಬಂದವರನ್ನು ಕ್ವಾರಂಟೈನ್‌ನಲ್ಲಿ ಇಡಬೇಕಿತ್ತು. ಆದರೆ, ಈ ಕೆಲಸ ಆಗಿಲ್ಲ ಎಂಬ ವಿಷಯ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಪಿಟಿಪಿ ಪರ ಸಚಿವ ಈಶ್ವರಪ್ಪ ಬ್ಯಾಟಿಂಗ್
ಪಿಟಿಪಿ ಪುತ್ರನ ಆರತಕ್ಷತೆ ಕುರಿತಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಸಮರ್ಥಿಸಿಕೊಂಡಿದ್ದಾರೆ. ಆರತಕ್ಷತೆಗೆ ನಾನು ಹೋದಾಗ ಹೆಚ್ಚಿನ ಜನರಿರಲಿಲ್ಲ. ಶಾಸಕರ ಮನೆ ಮದುವೆ ಎಂದ ಮೇಲೆ ಹೇಳಿದವರು ಹಾಗೂ ಹೇಳಿಸಿಕೊಳ್ಳದವರೂ ಬರುತ್ತಾರೆ ಎಂದು ತಾಲೂಕಿನ ಮಿಂಚೇರಿ ಗ್ರಾಮದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಪುತ್ರನ ಮದುವೆಯಲ್ಲಿ ನಿಯಮಗಳ ಉಲ್ಲಂಘನೆ ಬಗ್ಗೆ ಹರಪನಹಳ್ಳಿ ತಾಲೂಕು ಅರಸಿಕೆರೆ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.| ಸಿ.ಕೆ.ಬಾಬಾ, ಎಸ್ಪಿ ಬಳ್ಳಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net