

ಮಂಡ್ಯ: ಹೆಚ್ಚುವರಿ ಬಡ್ಡಿ ಕೊಡುವುದಾಗಿ ಹೇಳಿ ಹಣ ವಂಚಿಸಿದ್ದಾರೆಂದು ಆರೋಪಿಸಿ ಐಶ್ವರ್ಯಾಗೌಡ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.
ಇಲ್ಲಿನ ಚಾಮುಂಡೇಶ್ವರಿನಗರದ ನಿವಾಸಿ ಸೌಭಾಗ್ಯಾ ಎಂಬುವರು ಪಶ್ಚಿಮ ಪೊಲೀಸ್ ಠಾಣೆಗೆ ಜ.20ರಂದು ದೂರು ನೀಡಿದ್ದಾರೆ. ರಿಯಲ್ ಎಸ್ಟೇಟ್ ಹಾಗೂ ಚೀಟಿ ವ್ಯವಹಾರ ಮಾಡುವುದಾಗಿ ಹೇಳಿ 2017ರ ಜನವರಿಯಿಂದ ಜೂನ್ ಅವಧಿಯಲ್ಲಿ 33 ಲಕ್ಷ ರೂ ಹಾಗೂ 366 ಗ್ರಾಂ ಚಿನ್ನದ ಒಡವೆಗಳನ್ನ ಪಡೆಯಲಾಗಿತ್ತು. ಇದಕ್ಕಾಗಿ ಗಂಡನ ನಿವೃತ್ತಿ ಹಾಗೂ ಉಳಿತಾಯದ ಹಣ ನೀಡಲಾಗಿದೆ. ಒಂದು ಲಕ್ಷ ರೂ.ಗೆ ಶೇ.10 ಪರ್ಸೆಂಟ್ ಬಡ್ಡಿ ಕೊಡುವಂತೆ ಹಣ ಪಡೆದು ವಂಚಿಸಲಾಗಿದೆ ಎಂದು ಆರೋಪಿಸಿ ನವ್ಯಶ್ರೀ ಅಲಿಯಾಸ್ ಐಶ್ವರ್ಯಾಗೌಡ, ಈಕೆಯ ಪತಿ ಹರೀಶ್, ಸಹೋದರ ಮಂಜುನಾಥ್ ಹಾಗೂ ಯಶವಂತ್ ಎಂಬುವರ ವಿರುದ್ಧ ದೂರು ನೀಡಲಾಗಿದೆ. ಇದಕ್ಕೂ ಮೊದಲ ಐಶ್ವರ್ಯಾಗೌಡ ವಿರುದ್ಧ ಪೂರ್ವ ಪೊಲೀಸ್ ಠಾಣೆಯಲ್ಲಿ ಒಂದು ದೂರು ದಾಖಲಾಗಿದೆ.