ಸಚಿತಾ ರೈ ವಿರುದ್ಧ ಮತ್ತೊಂದು ಕೇಸ್

Sanchitha
Published on

ಕಾಸರಗೋಡು: ಬಾಡೂರು ಎಎಲ್‌ಪಿ ಶಾಲಾ ಶಿಕ್ಷಕಿ, ವಂಚಕಿ ಸಚಿತಾ ರೈ (27)ವಿರುದ್ಧ ಬದಿಯಡ್ಕ ಠಾಣೆಯಲ್ಲಿ ಮತ್ತೊಂದು ಕೇಸು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 13ಕ್ಕೇರಿದೆ. ಪಳ್ಳತ್ತಡ್ಕ ನೆಲ್ಲಿಕಳಯ ನಿವಾಸಿ ಅರವಿಂದಾಕ್ಷನ್ ಎಂಬುವರ ಪುತ್ರಿ ಅಮೃತಾಗೆ ಉದ್ಯೋಗದ ಭರವಸೆ ನೀಡಿ 2023 ಜನವರಿಯಿಂದ 2024 ಜ. 11ರ ವರೆಗೆ 12.71ಲಕ್ಷ ರೂ. ಪಡೆದು ವಂಚಿಸಿದ್ದಾಳೆ. ನ್ಯಾಯಾಲಯಕ್ಕೆ ಶರಣಾಗಲು ಕಾಸರಗೋಡು ವಿದ್ಯಾನಗರಕ್ಕೆ ತನ್ನ ಎಳೆಯ ಮಗುವಿನೊಂದಿಗೆ ಗುರುವಾರ ಆಗಮಿಸಿದ ಈಕೆಯನ್ನು ಕಾಸರಗೋಡು ಡಿವೈಸ್‌ಪಿ ಸಿ.ಕೆ ಸುನಿಲ್ ನೇತೃತ್ವದ ಪೊಲೀಸರ ತಂಡ ಬಂಧಿಸಿದ್ದು, ನ್ಯಾಯಾಲಯದ ಆದೇಶ ಪ್ರಕಾರ ಕಣ್ಣೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net