

ಮಡಿಕೇರಿ:
ಈಗಾಗಲೇ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಸ್ವಸ್ತಿಕ್ ಎಂಟರ್ಟೈನ್ಮೆಂಟ್ ಬ್ಯಾನರ್‌ನಲ್ಲಿ ಕೊಟ್ಟುಕತೀರ ಯಶೋಧ ಪ್ರಕಾಶ್ ನಿರ್ಮಿಸಿರುವ ಪ್ರಶಸ್ತಿ ವಿಜೇತ ನಿರ್ದೇಶಕ ಕೊಟ್ಟುಕತೀರ ಪ್ರಕಾಶ್ ಕಾರ್ಯಪ್ಪ ನಿರ್ದೇಶಿಸಿರುವ ಪೊಮ್ಮಾಲೆ ಕೊಡಗ್ ಕೊಡವ ಚಿತ್ರ ಸ್ಯಾಂಡಲ್ ವುಡ್‌ನ ಪ್ರತಿಷ್ಠಿತ ನಂದಿ ಫಿಲ್ಮಂ ಅವಾರ್ಡ್-೨೦೨೩ ರಲ್ಲಿ ಮೆಚ್ಚುಗೆಯ ಚಿತ್ರ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ಬೆಂಗಳೂರಿನ ಒರಿಯನ್ ಮಾಲ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪೊಮ್ಮಾಲೆ ಕೊಡಗ್ ಚಿತ್ರದಲ್ಲಿ ಅಭಿನಯಿಸಿರುವ ನಟಿ ಈರಮಂಡ ಹರಿಣಿ ವಿಜಯ್ ಅವರು ಕಾಂತಾರ ಖ್ಯಾತಿಯ ನಿರ್ದೇಶಕ ರಿ?ಬ್ ಶೆಟ್ಟಿ ಅವರಿಂದ ಇತ್ತೀಚೆಗೆ ಪ್ರಶಸ್ತಿ ಸ್ವೀಕರಿಸಿದರು.
ಪೊಮ್ಮಾಲೆ ಕೊಡಗ್ ಕೊಡವ ಚಿತ್ರವನ್ನು ನಿರ್ಮಿಸಿದ ಕೊಟ್ಟುಕತೀರ ಯಶೋಧ ಪ್ರಕಾಶ್ ಹಾಗೂ ಚಿತ್ರ ನಿರ್ದೇಶಕ ಕೊಟ್ಟುಕತೀರ ಪ್ರಕಾಶ್ ಕಾರ್ಯಪ್ಪ ಅವರು ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿ, ಆಚಾರ ವಿಚಾರ, ಪರಿಸರಕ್ಕೆ ಒತ್ತು ನೀಡಿ ಚಿತ್ರಗಳನ್ನು ತೆರೆಗೆ ತರುವ ಮೂಲಕ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಚಿತ್ರರಂಗದ ಮೆಚ್ಚುಗೆ ಗಳಿಸಿದ್ದಾರೆ. ಕೊಡಗಿನ ಹಲವು ಪ್ರತಿಭೆಗಳನ್ನು ಸಿನಿಮಾ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಕಟಪೂರ್ವ ಅಧ್ಯಕ್ಷ ಭಾ.ಮಾ. ಹರೀಶ್, ನಿರ್ಮಾಪಕ ನಿತ್ಯಾನಂದ ಪ್ರಭು, ಪದ್ಮಾವತಿ ಚಂದ್ರಶೇಖರ್ ಹಾಗೂ ಅನಿತಾ ರೆಡ್ಡಿ ನಂದಿ ಫಿಲ್ಮಂ ಅವಾರ್ಡ್ ನ ಸಂಸ್ಥಾಪರಾಗಿದ್ದಾರೆ. ನಂದಿ ಪ್ರಶಸ್ತಿಯಲ್ಲಿ ಕನ್ನಡ ಚಿತ್ರಗಳು ಸೇರಿದಂತೆ ಪ್ರಾದೇಶಿಕ ಭಾ?ೆಗಳಾದ ತುಳು, ಕೊಡವ, ಕೊಂಕಣಿ, ಬ್ಯಾರಿ ಹಾಗೂ ಬಂಜಾರ ಭಾ?ೆಯ ಚಿತ್ರಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ.