ಕೊಲೆ ಪ್ರಕರಣದಲ್ಲಿ ಮತ್ತೊಬ್ಬ ಬಂಧನ

crime
Published on

ಹುಬ್ಬಳ್ಳಿ: ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿ ಮಗನೇ ತನ್ನ ತಂದೆ ಹಾಗೂ ಮಲತಾಯಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಮತ್ತೊಬ್ಬನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಬಾಗಲಕೋಟ ಜಿಲ್ಲೆ ಬಾಡಗಿ ಗ್ರಾಮದ ಮಲ್ಲನಗೌಡ ಪಾಟೀಲ ಬಂಧಿತ. ಈತ ಕೊಲೆ ಆರೋಪಿಯ ಮಾವ. ಇವರ ಕುಮ್ಮಕ್ಕಿನಿಂದ ಗಂಗಾಧರ ಕೊಲೆ ಮಾಡಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ಜ. 9ರಂದು ರಾತ್ರಿ ಆಸ್ತಿ ವಿಚಾರಕ್ಕೆ ಗಂಗಾಧರ ಕೊಬ್ಬನವರ ತನ್ನ ತಂದೆ ಅಶೋಕ ಹಾಗೂ ಮಲತಾಯಿ ಶಾರದಮ್ಮ ಅವರನ್ನು ಹತ್ಯೆ ಮಾಡಿದ್ದ. 24 ಗಂಟೆಯಲ್ಲಿ ಆರೋಪಿಯನ್ನು ಗ್ರಾಮೀಣ ಪೊಲೀಸರು ಬಂಧಿಸಿದ್ದರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net