ಗುಂಡ್ಲುಪೇಟೆ ಮತ್ತೊಬ್ಬ ಆರೋಪಿ ಬಂಧನ

Published on

ಗುಂಡ್ಲುಪೇಟೆ: ಪಟ್ಟಣದಲ್ಲಿ ಇಬ್ಬರು ಯುವಕರು ನಡೆಸಿದ ಹಲ್ಲೆ ಬಳಿಕ ಮೃತಪಟ್ಟಿದ್ದ ಶಿವು ಸಾವಿನ ಪ್ರಕರಣದಲ್ಲಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಮಹಮ್ಮದ್ ರಫಿ(35) ಬಂಧಿತ ಆರೋಪಿ. ಪೊಲೀಸರು ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮತ್ತೊಬ್ಬ ಆರೋಪಿ ಬಂಧನಕ್ಕೆ ಒತ್ತಾಯಿಸಿ ಮೃತನ ಸಂಬಂಧಿಕರು ಹಾಗೂ ಸಂಘಟನೆ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸರು , ಘಟನೆ ನಡೆದ ದಿನದಂದು ಬಂಧಿತನಾಗಿದ್ದ ನಿಜಾಮುದ್ದೀನ್‌ನ ಸಹೋದರ ಮಹಮ್ಮದ್ ರಫಿ ಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net