ಮಾಹಿತಿ ಸ್ವಯಂ ಅಪ್‌ಡೇಟ್ ಮಾಡಲು ಸಜ್ಜಾಗಿ : ನಿರ್ದೇಶಕಿ ಸುಗಂಧಾ ಸಲಹೆ

0612KLB14
ಕಲಬುರಗಿಯಲ್ಲಿ ಭಾರತ ಸರ್ಕಾರದ ಅಂಕಿ ಸಂಖ್ಯೆ ಮತ್ತು ಕಾರ್ಯಕ್ರಮ ಸಚಿವಾಲಯ ಹಮ್ಮಿಕೊಂಡಿದ್ದ ಕೈಗಾರಿಕೆ ಜಾಗೃತಿ ಶಿಬಿರದಲ್ಲಿ ಇಲಾಖೆ ನಿರ್ದೇಶಕಿ ಸುಗಂಧಾ ಶ್ರೀವಾಸ್ತವ, ಅಯಾನ್ ಸೇನ್, ಪ್ರಮೋದ ಪಂಡಿತ ಇದ್ದರು.
Published on

ಕಲಬುರಗಿಯಲ್ಲಿ ವಾರ್ಷಿಕ  ಕೈಗಾರಿಕೆ ಸರ್ವೆ  ಜಾಗೃತಿ ಮೂಡಿಸುವ ತರಬೇತಿ ಕಾರ್ಯಾಗಾರ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಕೈಗಾರಿಕೆ ಘಟಕಗಳು ತಾವು ಉತ್ಪನ್ನ ಮಾಡುವ ವಸ್ತುಗಳ ಸಮಗ್ರ ಮಾಹಿತಿಯನ್ನು ಸ್ವಯಂ ಘೋಷಣೆ ಮಾಡಿ ಇಲಾಖೆಯ ಪೋರ್ಟ್ಲ್‌ನಲ್ಲಿ ಅಪ್‌ಡೇಟ್ ಮಾಡಲು ಸಜ್ಜಾಗಬೇಕು. ಅಲ್ಲದೆ ಸೆಲ್ಫ್ ಕಂಪ್ಲೆÊನ್‌ಗೆ ಒತ್ತು ನೀಡಬೇಕು ಎಂದು ಕೇಂದ್ರ ಸರ್ಕಾರದ ಅಂಕಿ ಸಂಖ್ಯೆ ಹಾಗೂ ಕಾರ್ಯಕ್ರಮ ಇಲಾಖೆ ನಿರ್ದೇಶಕಿ ಸುಗಂಧಾ ಶ್ರೀವಾಸ್ತವ್ ಸಲಹೆ ನೀಡಿದರು.

ನಗರದಲ್ಲಿರುವ ಭಾರತ ಸರ್ಕಾರದ ಅಂಕಿ ಸಂಖ್ಯೆ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಮಾದರಿ ಸಮೀಕ್ಷೆ ಕ್ಷೇತ್ರೀಯ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆ ದಾಖಲಾತಿ ಮಡುವ ಕುರಿತ ಜಾಗೃತಿ ಮೂಡಿಸುವ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಉತ್ಪಾದಕತೆಯ ಕುರಿತು ಸ್ವಯಂ ಘೋಷಣೆ ಮಾಡುವ ಪದ್ದತಿ ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ. ಅದಕ್ಕಾಗಿ ಅಗತ್ಯವಿರುವ ತಯಾರಿ ನಡೆದಿವೆ. ಹೀಗಾಗಿ ಎಲ್ಲರು ಹೊಸತನ ಕುರಿತು ಅಪ್‌ಡೇಟ್ ಆಗಬೇಕು. ಕೈಗಾರಿಕೆ ಘಟಕಗಳ ಕುರಿತು ಮಾಃಇತಿ ನೀಡುವ ಮೂಲಕ ಇಲಾಖೆಗೆ ಸಹಕರಿಸಬೇಕು ಎಂದರು.

ಕಳೆದ ಸಲ ಮಾಡಿದ ಕಾರ್ಯಕ್ರಮ ಕೈಗಾರಿಕೆ ಹಾಗೂ ಉತ್ಪಾದನಾ ಘಟಕದವರಿಗೆ ಸಾಕಷ್ಟು ಅನುವು ಆಗಿದೆ ಎಂದು ಹಲವರು ಹೇಳಿಕೊಂಡಿದ್ದರಿAದ ಅದನ್ನು ಮುಂದುವರೆಸಲಾಗುವುದು ಎಂದು ನಿರ್ದೇಶಕಿ ಸುಗಂಧಾ ತಿಳಿಸಿದರು.

ಅಂಕಿ ಸಂಖ್ಯೆ ಹಿರಿಯ ಅಧಿಕಾರಿಗಳಾದ ಪ್ರಮೋದ ಪಂಡಿತ, ಅಯಾನ್ ಸೇನ್,ವಿಜಯಪ್ರತಾಪಸಿಂಗ್, ದೇವಿಪ್ರಸಾದ, ರಿಶಬ್ ಶ್ರೀವಾಸ್ತವ್ ಇತರರಿದ್ದರು. ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ಕೈಗಾರಿಕಾ ಘಟಕದ ವ್ಯವಸ್ಥಾಪಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net