ಬೀರೂರಿನಲ್ಲಿ ವರ್ಷಧಾರೆ

BIRUR rain
ಬೀರೂರಿನಲ್ಲಿ ಮಳೆಯಾಗುತ್ತಿರುವಾಗ ಕಂಡುಬಂದ ದೃಶ್ಯ.
Published on

ಬೀರೂರು: ಪಟ್ಟಣ ಹಾಗೂ ಸುತ್ತಮುತ್ತ ಶನಿವಾರ ರಾತ್ರಿಯಿಂದ ಭಾನುವಾರ ಮುಂಜಾನೆವರೆಗೂ ಧಾರಾಕಾರವಾಗಿ ಮಳೆಯಾಗಿದ್ದು, ಅಡಕೆ ಕೊಯ್ಲು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಕಳೆದ ವಾರ ಆಗಾಗ ಬಿಡುವು ಕೊಟ್ಟು ಮಳೆಯಾಗುತ್ತಿತ್ತು. ಎರಡು ದಿನಗಳಿಂದ ಮಳೆಯಿರಲಿಲ್ಲ. ಆದರೆ ಶನಿವಾರ ರಾತ್ರಿ ಆರಂಭವಾದ ಮಳೆ ಭಾನುವಾರ ಬೆಳಗಿನವರೆಗೂ ಸುರಿಯಿತು. ಮಳೆಯಿಂದಾಗಿ ಅಡಕೆ ಚೇಣಿದಾರರು ಕಾಯಕಕ್ಕೆ ಭಾನುವಾರ ರಜೆ ನೀಡಿದರು. ತೋಟದಿಂದ ತಂದಿರುವ ಅಡಕೆ ತುಡಕೆ ಮನೆಗಳಲ್ಲಿ ಕೊಳೆಯುತ್ತಿರುವ ಹಿನ್ನೆಲೆಯಲ್ಲಿ ಸುಲಿಸಿ, ಬೇಯಿಸಿ, ಒಣಗಿಸಲು ಸಾಧ್ಯವಾಗದೆ ಹೂ ಕೂರುತ್ತಿವೆ. ಮತ್ತೆ ತೋಟದಿಂದ ತರಲು ಆಗುವುದಿಲ್ಲ ಎಂದು ಕಾರ್ಮಿಕರಿಗೆ ಬಿಡುವು ಕೊಟ್ಟಿದ್ದಾರೆ. ಆದರೂ ಅಡಕೆ, ತೆಂಗು ಬೆಳೆಗಳೇ ಪ್ರಮುಖವಾಗಿರುವ ಇಲ್ಲಿ ಯಾವುದೇ ರೀತಿಯ ಹಾನಿಯಾಗದೆ ಸಂಪಾಗಿವೆ. ಇನ್ನುಳಿದಂತೆ ರಾಗಿ ಬೆಳೆಗೆ ಮಳೆ ಉತ್ತಮವಾಗಿದ್ದು ರೈತರು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net