ಉಚ್ಚ ಬಸವೇಶ್ವರ ದೇವರ ವಾರ್ಷಿಕ ಪೂಜೆ

16SPT6
ಸೋಮವಾರಪೇಟೆ ಸಮೀಪದ ಕಾರೆಕೊಪ್ಪದ ಉಚ್ಚ ಬಸವೇಶ್ವರ ದೇವರ ಉತ್ಸವದಲ್ಲಿ ಮಹಿಳೆಯರು ಪೂರ್ಣಕುಂಭ ಮೆರವಣಿಗೆ ನಡೆಸಿದರು.
Published on

 ಸೋಮವಾರಪೇಟೆ: ಸಮೀಪದ ಕಾರೆಕೊಪ್ಪದ ಉಚ್ಚ ಬಸವೇಶ್ವರ ದೇವರ ವಾರ್ಷಿಕ ಪೂಜೆ ಇತ್ತೀಚೆಗೆ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಅರ್ಚಕರಾದ ಮಾದೇವ ನೇತೃತ್ವದಲ್ಲಿ ಗ್ರಾಮದ ಬಾವಿಕಟ್ಟೆಯಲ್ಲಿ ಗ್ರಾಮದ ಮಹಿಳೆಯರು ಗಂಗಾ ಪೂಜೆ ನೆರವೇರಿಸಿದರು. ಪೂರ್ಣಕುಂಭ ಹೊತ್ತ ಮಹಿಳೆಯರು ಪಂಚವಾದ್ಯ ಮೆರವಣಿಗೆಯೊಂದಿಗೆ ದೇವಾಲಯ ಪ್ರವೇಶಿಸಿದರು. ಮಹಾಮಂಗಳಾರತಿ ಪ್ರಸಾದ ವಿನಿಯೋಗದ ನಂತರ ಭಕ್ತಾದಿಗಳಿಗೆ ಅನ್ನದಾನ ಮಾಡಲಾಯಿತು. ವಾರ್ಷಿಕ ಪೂಜೆ ಪ್ರಯುಕ್ತ ದೇವಾಲಯ ಮತ್ತು ಗ್ರಾಮದ ಪ್ರಮುಖ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕಿರಣ್ ಕುಶಾಲಪ್ಪ, ಕಾರ್ಯದರ್ಶಿ ಯೊಗೇಶ್, ಪ್ರಮುಖರಾದ ರಾಜಣ್ಣ, ಲವ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net