ಚಾಮುಂಡೇಶ್ವರಿ ದೇಗುಲದಲ್ಲಿ ವಾರ್ಷಿಕ ಪೂಜೆ

26bhr 2 (1)
Published on

ಬಾಳೆಹೊನ್ನೂರು: ಅಕ್ಷರನಗರದ ಗುರಿಕಟ್ಟೆಬೈಲು ಚಾಮುಂಡೇಶ್ವರಿ ದೇಗುಲದ ನಾಲ್ಕನೇ ವಾರ್ಷಿಕ ಪೂಜಾ ಕಾರ್ಯಕ್ರಮ ಮಂಗಳವಾರ ಸಂಭ್ರಮದಿಂದ ನಡೆಯಿತು. ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಕಲಾಹೋಮ, ಕಳಸಾಭಿಷೇಕ, ನಾಗದೇವರಿಗೆ ಸರ್ಪಕಲ್ಪ ಹೋಮ, ಪವಮಾನ ಅಭಿಷೇಕ, ಶ್ರೀ ಚೌಡಿಗೆ ಕಲಾಹೋಮ, ಕಳಸಾಭಿಷೇಕ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಂಜೆ ನಾಗನಿಗೆ ಆಶ್ಲೇಷಬಲಿ, ಚಾಮುಂಡೇಶ್ವರಿ ಉತ್ಸವ ನಡೆಯಿತು. ಮಾ.2ರಂದು ದೇವಾಲಯದಲ್ಲಿ ಚೌಡಿ ಹರಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಎಂ.ಎಸ್.ಅರುಣೇಶ್, ಅಧ್ಯಕ್ಷ ಆರ್.ಡಿ.ಮಹೇಂದ್ರ, ವಿನೋದ್, ತಿಪ್ಪೇಶ್, ಸಂದೀಪ್‌ಶೆಟ್ಟಿ, ಎಂ.ಅರ್.ರವಿಗೌಡ, ನಾಗರಾಜ್, ಆರ್ಮುಗ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net