ವಾರ್ಷಿಕ ಹತ್ತು ಕೋಟಿ ವಹಿವಾಟು

22 ckm 4
ಚಿಕ್ಕಮಗಳೂರಿನ ಎಂಇಎಸ್ ಕಾಲೇಜು ಸಭಾಂಗಣದಲ್ಲಿ ನಡೆದ ತಿರುವಳ್ಳುವರ್ ಪತ್ತಿನ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಸಭೆಯನ್ನು ಸಂಘದ ಅಧ್ಯಕ್ಷ ಜಿ.ಶಂಕರಕುಮಾರ್ ಉದ್ಘಾಟಿಸಿದರು. ಕೆ.ಕೃಷ್ಣರಾಜು, ಜಿ.ರಮೇಶ್, ಎ.ಲಕ್ಷಿö್ಮÃನಾರಾಯಣ, ಪಿ.ಗೋಪಿನಾಥ್, ಡಿ.ಮಧು, ಸಿ.ಎಸ್.ಮಂಜುನಾಥ್, ಎನ್. ಶ್ವೇತಾ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ತಿರುವಳ್ಳವರ್ ಪತ್ತಿನ ಸಹಕಾರ ಸಂಘವು ಪ್ರಸಕ್ತ ವರ್ಷ ಸುಮಾರು ಹತ್ತು ಕೋಟಿ ರೂ. ವಹಿವಾಟು ನಡೆಸುವ ಮೂಲಕ ಆರ್ಥಿಕ ಪ್ರಗತಿಯತ್ತ ಹೆಜ್ಜೆಹಾಕುತ್ತಿದೆ ಎಂದು ಸಂಘದ ಅಧ್ಯಕ್ಷ ಜಿ.ಶಂಕರ್‌ಕುಮಾರ್ ತಿಳಿಸಿದರು.

ನಗರದ ಎಂಇಎಸ್ ಕಾಲೇಜು ಸಭಾಂಗಣದಲ್ಲಿ ನಡೆದ ತಿರುವಳ್ಳುವರ್ ಪತ್ತಿನ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದಸ್ಯರ ಸಹಕಾರದಿಂದ ಸಂಘವು ಶೈಕ್ಷಣಿಕ ಸಾಲಿಗೆ ೧೨ ವರ್ಷಗಳನ್ನು ಪೂರೈಸಿ ಮುನ್ನೆಡೆಯುತ್ತಿದೆ. ಈಗಾಗಲೇ ೧,೨೦೦ಕ್ಕೂ ಹೆಚ್ಚು ಸದಸ್ಯರು ಸಂಘದಲ್ಲಿ ನೊಂದಣಿಯಾಗಿದ್ದು, ಈ ಸಾಲಿನಲ್ಲಿ ಸುಮಾರು ೫೫ ಸಾವಿರ ರೂ.ಗಳಷ್ಟು ನಿವ್ವಳ ಲಾಭವನ್ನು ಗಳಿಸಿ ಪ್ರತಿ ವರ್ಷವು ಲಾಭದಿಂದ ಬೆಳವಣಿಗೆ ಹೊಂದುತ್ತಿದೆ ಎಂದರು.
ಸAಘಕ್ಕೆ ಸ್ವಂತ ಕಟ್ಟಡ ನಿರ್ಮಿಸುವ ಉz್ದೆÃಶದಿಂದ ಈ ಸಾಲಿನಲ್ಲಿ ಡಿವಿಡೆಂಟ್‌ನ್ನು ಸದಸ್ಯರಿಗೆ ವಿತರಿಸಲಾಗಿದ್ದು, ಮುಂದೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಆಡಳಿತ ಮಂಡಳಿ ಪ್ರಯತ್ನದಲ್ಲಿ ತೊಡಗಿಸಿಕೊಂಡಿದೆ. ಸದಸ್ಯರನ್ನು ಆರ್ಥಿಕವಾಗಿ ಮೇಲೆತ್ತುವ ದೃಷ್ಟಿಯಿಂದ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ಒದಗಿಸಿ ಬದುಕು ರೂಪಿಸಲಾಗುತ್ತಿದೆ ಎಂದು ಹೇಳಿದರು.
ಉಪಾಧ್ಯಕ್ಷ ಕೆ.ಕೃಷ್ಣರಾಜು ಮಾತನಾಡಿ, ಬಡವರು ಹಾಗೂ ಸ್ವಉದ್ಯೋಗ ಕೈಗೊಳ್ಳುವ ಸದಸ್ಯರುಗಳಿಗೆ ಶೀಘ್ರಗತಿಯಲ್ಲಿ ೫ ರಿಂದ ೨೫ ಸಾವಿರ ರೂಪಾಯಿವರೆಗೆ ಸಾಲಸೌಲಭ್ಯ ಒದಗಿಸಲಾಗುತ್ತದೆ. ಜೊತೆಗೆ ಸಂಘದ ಠೇವಣಿದಾರರಿಗೆ ಶೇ.೧೦.೫ರಷ್ಟು ಹಾಗೂ ಆರ್‌ಡಿಗೆ ಶೇ. ೧೦ ರಷ್ಟು ಬಡ್ಡಿದರ ನೀಡುತ್ತಿz್ದÉÃವೆ ಎಂದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಜಿ.ರಮೇಶ್, ಸುಶೀಲ್‌ದಾಸ್, ಎ.ಲಕ್ಷಿö್ಮÃನಾರಾಯಣ, ಪಿ.ಗೋಪಿನಾಥ್, ಡಿ.ಮಧು, ಸಿ.ಎಸ್.ಮಂಜುನಾಥ್, ಅನೀಸಾ ಬೆನೆಜರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸಂದೀಪ್‌ಕುಮಾರ್, ನಗದು ಗುಮಾಸ್ತೆ ಎನ್.ಶ್ವೇತ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net