ವಾರ್ಷಿಕ ವಿಶೇಷ ಪೂಜೆ

26SPT1
Published on

ಸೋಮವಾರಪೇಟೆ: ಪಟ್ಟಣದ ವೆಂಕಟೇಶ್ವರ ಬ್ಲಾಕ್‌ನ ಶ್ರೀ ಮಾರಿಯಮ್ಮ ದೇವಾಲಯದಲ್ಲಿ ಆದಿಕರ್ನಾಟಕ ಸಮಾಜ ಮತ್ತು ಶ್ರೀ ಮಾರಿಯಮ್ಮ ಯುವಕ ಮಿತ್ರ ಮಂಡಳಿಯಿಂದ ಅದ್ದೂರಿಯಾಗಿ 75ನೇ ವಾರ್ಷಿಕ ಪೂಜೆ ಶನಿವಾರ ಜರುಗಿತು.

ಮಾರಿಗುಡಿಯಲ್ಲಿ ವಿವಿಧ ಪೂಜೆಗಳೊಂದಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಮಂಡಳಿ ಅಧ್ಯಕ್ಷ ಎಚ್.ಆರ್. ಹೇಮಂತ್, ಪದಾಧಿಕಾರಿಗಳಾದ ಪ್ರೇಮಾ, ಪ್ರಮೋದ್, ವಸಂತ, ಶ್ರೀಕಾಂತ್, ಜವರಪ್ಪ, ಸರಿತಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net