

ವಿಜಯವಾಣಿ ಸುದ್ದಿಜಾಲ ಕುಂದಾಣ
ವಿದ್ಯಾರ್ಥಿಗಳನ್ನು ಮಾನವೀಯ ಮತ್ತು ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವಲ್ಲಿ ಎನ್‌ಎಸ್‌ಎಸ್ ಶಿಬಿರ ಸಹಕಾರಿಯಾಗಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷ ದ್ಯಾವರಹಳ್ಳಿ ಶಾಂತಕುಮಾರ್ ಅಭಿಪ್ರಾಯಪಟ್ಟರು.
ಬೆಂಗಳೂರು ಮಲ್ಲೇಶ್ವರಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕದಿಂದ ದ್ಯಾವರಹಳ್ಳಿಯಲ್ಲಿಹಮ್ಮಿಕೊಂಡಿದ್ದ ವಾರ್ಷಿಕ ವಿಷೇಶ ಶಿಬಿರದಲ್ಲಿ ಮಾತನಾಡಿದರು.
ಎನ್‌ಎಸ್‌ಎಸ್ ಶಿಬಿರದಿಂದ ನಾಯಕತ್ವ ಗುಣ ವೃದ್ಧಿಯಾಗಲಿದೆ. ಗ್ರಾಮೀಣ ಪ್ರದೇಶದ ಅನಕ್ಷರಸ್ಥರನ್ನು ಗುರುತಿಸಿ, ಶಿಕ್ಷಣದ ಅರಿವು ಮತ್ತು ಶಿಸ್ತು ಪಾಲಿಸಲು ತಿಳಿವಳಿಕೆ ನೀಡಬೇಕು. ಮನೆ ಸುತ್ತಮುತ್ತ ಶುಚಿತ್ವ ಕಾಪಾಡಿಕೊಳ್ಳಬೇಕು. ಮನುಷ್ಯನ ಸ್ವಾರ್ಥ ಸಾಧನೆಗಾಗಿ ಮರಗಿಡಗಳನ್ನು ಕಡಿದು ಹಾಕುತ್ತಿದ್ದಾನೆ. ಹೀಗಾಗಿ ಪ್ರತಿಯೊಬ್ಬರು ಗಿಡ ನೆಟ್ಟು ಪೋಷಿಸಬೇಕು ಎಂದರು.
ಎನ್‌ಎಸ್‌ಎಸ್ ಸಂಯೋಜಕ ಡಾ.ಗೋವಿಂದಗೌಡ ಮಾತನಾಡಿ, ಪ್ರತಿವರ್ಷದಂತೆ ರಾಷ್ಟ್ರೀಯ ಸೇವಾ ಯೋಜನೆ ಅಡಿ ವಿವಿಧ ಬಗೆಯ ಸೇವಾ ಚಟುವಟಿಕೆಗಳನ್ನು ಗ್ರಾಮೀಣ ಭಾಗದಲ್ಲಿ ಹಮ್ಮಿಕೊಳ್ಳುತ್ತೇವೆ ಎಂದರು.
ಎನ್‌ಎಸ್‌ಎಸ್ ಸಂಯೋಜಕ ಡಾ.ಗೋವಿಂದೇಗೌಡ, ಡಾ.ಪ್ರತಿಮಾ, ಮೂರ್ತಿ, ಶಿವಲಿಂಗಯ್ಯ, ಡಾ.ರಮೇಶ್, ಮಹದೇವಸ್ವಾಮಿ, ಕುಂದಾಣ ಗ್ರಾಪಂ ಅಧ್ಯಕ್ಷೆ ನೇತ್ರಾ, ಸದಸ್ಯ ನಾರಾಯಣಸ್ವಾಮಿ, ಪಿಡಿಒ ಪದ್ಮನಾಭ ಇದ್ದರು.