

ಚನ್ನಗಿರಿ: ತುಮ್‌ಕೋಸ್ ಸಂಸ್ಥೆ 2013ರ ಮಾರ್ಚ್ 31ರ ವರೆಗೆ ಒಟ್ಟು 65.32 ಕೋಟಿ ನಿವ್ವಳ ಲಾಭ ಹೊಂದಿದ್ದು, 51.69 ಕೋಟಿ ರೂ. ಖರ್ಚು ಕಳೆದು 13.62 ಕೋಟಿ ರೂ. ಲಾಭಾಂಶ ಪಡೆದಿದೆ ಎಂದು ತುಮ್‌ಕೋಸ್ ಅಧ್ಯಕ್ಷ ಆರ್.ಎಂ. ರವಿ ತಿಳಿಸಿದರು.
ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ತುಮ್‌ಕೋಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ 39ನೇ ವಾರ್ಷಿಕ ವರದಿ ಸಭೆ ಉದ್ಘಾಟನೆ ನೆರವೇರಿಸಿ, 2022-23ನೇ ಸಾಲಿನ ಜಮಾ ಖರ್ಚು ವಿವರ ನೀಡಿ ಭಾನುವಾರ ಮಾತನಾಡಿದರು.
ಸಂಸ್ಥೆ 2034ನೇ ಸಾಲಿಗೆ ಹೆಚ್ಚು ತಂತ್ರಜ್ಞಾನ ಬಳಸಿ ಸದಸ್ಯರಿಗೆ ಅನುಕೂಲವಾಗುವಂತಹ ಯೋಜನೆ ನೀಡಲಿದ್ದು, ಈಗಾಗಲೇ ಮೊಬೈಲ್ ಅಪ್ಲಿಕೇಷನ್ ವ್ಯವಸ್ಥೆ ಜಾರಿಗೊಳಿಸಿದೆ. ಜತೆಗೆ ತಮ್ಮ ಖಾತೆಯ ಹಣ ಆರ್‌ಟಿಜಿಎಸ್, ನೆಫ್ಟ್ ಮೂಲಕ ವರ್ಗಾಹಿಸಲು ಹೋಸ್ಟ್ ಟು ಹೋಸ್ಟ್ ವ್ಯವಸ್ಥೆ ಅಳವಡಿಸಿದೆ ಎಂದರು.
ಹೊಸದಾಗಿ ಸೂಪರ್ ಮಾರ್ಕೆಟ್ ಪ್ರಾರಂಭಿಸಿದ್ದು, 15 ಕಿ.ಮೀ. ದೂರದವರೆಗೆ ಗ್ರಾಹಕರ ಮನೆ ಬಾಗಿಲಿಗೆ ಯೋಜನೆ ತಲುಪಿಸುವ ವ್ಯವಸ್ಥೆ ಮಾಡಿದೆ ಎಂದರು.
ಅಡಕೆ ವ್ಯಾಪಾರ ಮಾಡುವ ಜತೆಯಲ್ಲಿ ಸದಸ್ಯರ ಹಿತ ಕಾಪಾಡಲು ಅಪಘಾತದಲ್ಲಿ ಮರಣ ಹೊಂದಿದ 7 ಸದಸ್ಯರಿಗೆ ತಲಾ 3 ಲಕ್ಷದಂತೆ 21 ಲಕ್ಷ ರೂ. ಸಹಾಯಧನ ನೀಡಲಾಗಿದೆ. ಅಡಕೆ ಬೆಲೆ ಸ್ಥಿರತೆ ಕಾಪಾಡುವ ಸಲುವಾಗಿ ಪ್ರಧಾನಿಗೆ ಪತ್ರ ವ್ಯವಹಾರ ಮಾಡಿದ್ದು, ಪ್ರಧಾನಿ ಕಚೇರಿಯಿಂದ ಸಂಬಂಧಿಸಿದ ಇಲಾಖೆಗಳಿಗೆ ಅದೇಶ ಬಂದಿದೆ ಎಂದು ವಿವರಿಸಿದರು.
ಸಭೆಯಲ್ಲಿ ನಿರ್ದೇಶಕರಾದ ಎಚ್.ಎಸ್. ಶಿವಕುಮಾರ್, ಟಿ.ವಿ. ರಾಜು, ಕೆ.ಬಿ. ಸಂತೋಷ್, ಎಂ.ಸಿ. ದೇವರಾಜ್, ಜಿ.ಸಿ. ಶಿವಕುಮಾರ್, ಜಿ.ಆರ್. ಶಿವಕುಮಾರ್, ಎಚ್. ಸುರೇಶ್, ಎ.ಎಂ. ಚಂದ್ರಶೇಖರಪ್ಪ, ಅರ್. ಕೆಂಚಪ್ಪ, ಎನ್. ಗಂಗಾಧರಪ್ಪ, ಎಂ.ಎಸ್. ರಮೇಶ್‌ನಾಯ್ಕ, ಎಂ.ಎಸ್. ದೇವೇಂದ್ರಪ್ಪ, ಪಾರ್ವತಮ್ಮ, ಸಂಸ್ಥೆ ವ್ಯವಸ್ಥಾಪಕ ಎನ್.ಪಿ. ಮಧು ಇದ್ದರು.