ಪಂಚಮುಖಿ ವಾಯುಪುತ್ರನಿಗೆ ವಾರ್ಷಿಕ ಪೂಜೆ

pancha muki
Published on

ಮಡಿಕೇರಿ: ಪ್ರಾಥಮಿಕ ಕೃಷಿ ಸಹಕಾರ ಸಂಘದ ಈರಳೆ ಘಟಕದಲ್ಲಿ ಪ್ರಷ್ಠಾಪಿಸಿರುವ ಪಂಚಮುಖಿ ವಾಯುಪುತ್ರ ಮೂರ್ತಿಗೆ ಮಕರ ಸಂಕ್ರಾತಿ ಪ್ರಯುಕ್ತ ಗುರುವಾರ ವಾರ್ಷಿಕ ಪೂಜೆಯನ್ನು ನೆರವೇರಿಸಲಾಯಿತು.


ಪೂರ್ವಾಹ್ನ ಚೆಟ್ಟಳ್ಳಿ ಸಹಕಾರ ಸಂಘದ ಶ್ರೀನರೇಂದ್ರ ಮೋದಿ ಭವನದಲ್ಲಿರುವ ವಿಘ್ನೇಶ್ವರ, ವೀರಾಂಜನೇಯ, ಮಹಾವಿಷ್ಣುವಿಗೆ, ಮುಖ್ಯಕಚೇರಿಯಲ್ಲಿರುವ ಪಶುಪತಿ ನಾಥ ಹಾಗೂ ಕಾವೇರಿಮಾತೆಗೆ ಪೂಜೆಸಲ್ಲಿಸಲಾಯಿತು.


ನಂತರದಲ್ಲಿ ಈರಳೆ ಶಾಖೆಯಲ್ಲಿರುವ ಪಂಚಮುಖಿ ವಾಯುಪುತ್ರ ಮೂರ್ತಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆಸಲ್ಲಿಸಿ ಮಕ್ಕಳು ಹಾಗೂ ಸಾರ್ವಜನಿಕರಿಂದ ಆರತಿ ಬೆಳಗಲಾಯಿತು. ಮಹಾಮಂಗಳಾರತಿಯ ನಂತರ ಪಾಯಸ ಹಾಗೂ ಪ್ರಸಾದವಿನಿಯೋಗ ನೆರವೇರಿತು.


ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ, ಗ್ರಾಮಸ್ಥರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net