ವಾರ್ಷಿಕ ಕಾರ್ಯಕ್ರಮ ಸಂಪನ್ನ

19bkl2- annual programme
Published on

ಭಟ್ಕಳ: ಇಲ್ಲಿನ ಶ್ರೀ ಕಾಳಿಕಾಂಬಾ ದೇವಸ್ಥಾನ ಚೌಥನಿಯಲ್ಲಿ ವಿಶ್ವಕರ್ಮ ಬ್ರಾಹ್ಮಣ ಯುವಕ ಸಂಘ ಹಾಗೂ ಶ್ರೀ ಕಾಳಿಕಾಂಬಾ ದೇವಸ್ಥಾನದ ವಾರ್ಷಿಕ ಕಾರ್ಯಕ್ರಮವು ಭಾನುವಾರ ವಿಜ್ರಂಭಣೆಯಿಂದ ನಡೆಯಿತು.

ಶ್ರೀ ಕಾಳಿಕಾಂಬಾ ಮಹಿಳಾ ಸಂಘದ ಅಧ್ಯಕ್ಷೆ ಸುನಂದಾ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿರಸಿಯ ಕಿರಣ್ ಆಚಾರ್ಯ, ಕ್ಷೇತ್ರದ ಆಡಳಿತ ಮೊಕ್ತೇಸರರಾದ ಗಜಾನನ ಶಂಕರ ಆಚಾರ್ಯ, ವಿಶ್ವಕರ್ಮ ಬ್ರಾಹ್ಮಣ ಯುವಕ ಸಂಘದ ಅಧ್ಯಕ್ಷ ಚಂದ್ರಶೇಖರ ಆಚಾರ್ಯ, ಪ್ರಭಾಕರ ಆಚಾರ್ಯ ಆವರ್ಸೆ, ಶಿಕ್ಷಕಿ ಗೀತಾ ಚಂದ್ರ ಆಚಾರ್ಯ ಕಾರ್ಕಳ, ಕ್ಷೇತ್ರದ 2ನೇ ಮೊಕ್ತೇಸರರಾದ ಗೋವಿಂದ ಆಚಾರ್ಯ, 3ನೇ ಮೊಕ್ತೇಸರ ಶಿವರಾಮ ಆಚಾರ್ಯ ಮಾತನಾಡಿದರು. ದೇವಸ್ಥಾನದ ಪ್ರಧಾನ ಅರ್ಚಕ ವಾಸುದೇವ ಪುರೋಹಿತರ ಪ್ರಾರ್ಥಪ್ರಾರ್ಥಿಸಿದರು. ಪದ್ಮಾವತಿ ಸತೀಶ ಆಚಾರ್ಯ ಸ್ವಾಗತಿಸಿದರು. ವೆಂಕಟೇಶ ಆಚಾರ್ಯ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net