ಮಹಿಳಾ ಸಹಕಾರ ಸಂಘದ ವಾರ್ಷಿಕ ಸಭೆ

24SPT3
ಸೋಮವಾರಪೇಟೆ ಮಹಿಳಾ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಮಾತನಾಡಿದರು. ಜ್ಯೋತಿ, ಸುಮಾ, ಜಲಜಾ, ಗಾಯತ್ರಿ ಇದ್ದರು.
Published on

ಸೋಮವಾರಪೇಟೆ: ಮಹಿಳಾ ಸಹಕಾರ ಸಂಘದ ವಾರ್ಷಿಕ ಸಭೆ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿತ್ತು.

ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ ಮಾತನಾಡಿ, ಸಂಘದ ಸದಸ್ಯರ ಪಾಲು ಬಂಡವಾಳ 200 ರೂ.ಗಳಿದ್ದು, ಅದನ್ನು 500 ರೂ.ಗೆ ಹೆಚ್ಚಿಸಬೇಕಾಗಿದೆ. ಮಹಿಳಾ ಸಮಾಜದ ಮಳಿಗೆ ಕಾಮಗಾರಿ ನಡೆಯುತ್ತಿದ್ದು, ಸದಸ್ಯರು ಧನ ಸಹಾಯ ಮಾಡಬೇಕಿದೆ ಎಂದರು. ಸೆ.29ರಂದು ಸಂಘದಿಂದ ಸರಸ್ವತಿ ಪೂಜೆ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಸಭೆಯಲ್ಲಿ ಸಂಘದ ಕಾರ್ಯದರ್ಶಿ ಜ್ಯೋತಿ ಶುಭಕರ್, ನಿರ್ದೇಶಕರಾದ ಸುಮಾ ಸುದೀಪ್, ಜಲಜಾ ಶೇಖರ್, ಗಾಯತ್ರಿ ನಾಗರಾಜ್, ಗೀತಾ ರಾಜು, ಪಂಕಜಾ ಪ್ರಭಾಕರ್, ಉಮಾ ರುದ್ರಪ್ರಸಾದ್, ಜಯಲಕ್ಷ್ಮೀ ಸುಬ್ರಮಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net