

ಹುಬ್ಬಳ್ಳಿ : ಸ್ವಕುಳ ಸಾಳಿ ವಾರ್ತೆ ಮಾಸಪತ್ರಿಕೆಯ 15ನೇ ವರ್ಷದ ಪ್ರಥಮ ಸಂಚಿಕೆ ಬಿಡುಗಡೆ, ಕರ್ನಾಟಕ ರಾಜ್ಯ ಸ್ಟಕುಳಸಾಳಿ ಸಮಾಜದ ವಾರ್ಷಿಕ ಸರ್ವಸಾಧಾರಣ ಸಭೆ ಮತ್ತು ಸಮಾಜದ ನೂತನ ಮಹಿಳಾ ಮಂಡಳದ ಪದಾಧಿಕಾರಿಗಳ ರಚನೆ ನಗರದಲ್ಲಿ ಇತ್ತೀಚೆಗೆ ನಡೆಯಿತು.
ರಾಣೆಬೆನ್ನೂರು ತಾಲೂಕು ಐರಣಿ ಮಠದ ಪೀಠಾಧಿಕಾರಿ ಶ್ರೀ ಗಜದಂಡ ಮನಿಮಠ ಸ್ವಾಮೀಜಿ 15ನೇ ವರ್ಷದ ಮಾಸಪತ್ರಿಕೆ ಹಾಗೂ 2025 ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ನೂತನ ಮಹಿಳಾ ಮಂಡಳದ ರಚನೆ, ಸಮಾಜದ ಅಧ್ಯಕ್ಷ ಚಂದ್ರಕಾಂತ ಭಂಡಾರಿ ನೇತೃತ್ವದಲ್ಲಿ ನಡೆಯಿತು. ಅಧ್ಯಕ್ಷೆಯಾಗಿ ಗೀತಾ ಏಕಬೋಟೆ (ಹುಬ್ಬಳ್ಳಿ,), ಉಪಾಧ್ಯಕ್ಷೆಯಾಗಿ ಡಾ. ಅಪರ್ಣ ಏಕಬೋಟೆ (ಕಲಬುರ್ಗಿ), ಖಜಾಂಚಿಯಾಗಿ ಚಂದ್ರಮತಿ ದಿವಟೆ (ಹುಬ್ಬಳ್ಳಿ ), ಪ್ರಧಾನ ಕಾರ್ಯದರ್ಶಿಯಾಗಿ ಸ್ಮಿತಾ ಗಾಯಕವಾಡ (ಬೆಂಗಳೂರು) ಆಯ್ಕೆಯಾದರು. ಲಲಿತಾ ನಾಗರಾಜ್, ಅಖಿಲ ಭಾರತ ಸ್ವಕುಳ ಸಾಳಿ ಸಮಾಜದ ಮಹಿಳಾ ಮಂಡಳ ಅಧ್ಯಕ್ಷೆ ಶಶಿಕಲಾ ಚೌದರಿ, ವಿದ್ಯಾ ಕ್ಷೀರಸಾಗರ, ಪ್ರೇಮಾ ಕ್ಷೀರಸಾಗರ ಹಾಗೂ ಇತರರು ಉಪಸ್ಥಿತರಿದ್ದರು, ಡಾ. ಗಾಯತ್ರಿ ಕ್ಷೀರಸಾಗರ ನಿರೂಪಿಸಿದರು.