ಕಾಲೇಜಿನ ಅಭಿವೃದ್ಧಿ ಹಳೇ ವಿದ್ಯಾರ್ಥಿಗಳ ಜವಾಬ್ದಾರಿ: ಪ್ರವೀಣ್ ಭೋಜ ಶೆಟ್ಟಿ ಹೇಳಿಕೆ

New Project (4)
Published on

ಮೂಲ್ಕಿ: ಉತ್ತಮ ಶಿಕ್ಷಣ ಸಂಪನ್ಮೂಲ ಹೊಂದಿದ ವಿಜಯಾ ಕಾಲೇಜು ಮುಂದೆಯೂ ಬೆಳಗುವಂತೆ ಮಾಡುವುದು ಸಾಧಕ ಹಳೇ ವಿದ್ಯಾರ್ಥಿಗಳ ಜವಾಬ್ದಾರಿ ಎಂದು ಹಳೇ ವಿದ್ಯಾರ್ಥಿ ಹಾಗೂ ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಹೇಳಿದರು.

ಮೂಲ್ಕಿ ವಿಜಯ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.

ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ ವಾರ್ಷಿಕ ವರದಿ ನೀಡಿ, ಮುಂಬೈ ಹಳೇ ವಿದ್ಯಾರ್ಥಿ ಸಂಘ ವಾರ್ಷಿಕ 4ಲಕ್ಷ ರೂ.ಗಳ ವಿದ್ಯಾರ್ಥಿ ಸ್ಕಾಲರ್ ಶಿಪ್ ನೀಡುತ್ತಾ ಬಂದಿದ್ದಾರೆ. ಹಳೇ ವಿದ್ಯಾರ್ಥಿ ಸಂಘ ಮೂಲ್ಕಿ ಹಾಗೂ ಹಳೇ ವಿದ್ಯಾರ್ಥಿಗಳು ಈ ವರ್ಷದಲ್ಲಿ ಕಾಲೇಜಿನ ಅಭಿವೃದ್ಧಿಗೆ 8 ಲಕ್ಷ ರೂ. ದೇಣಿಗೆ ನೀಡಿರುತ್ತಾರೆ ಎಂದರು.

ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷೆ ಸುಮಲತಾ ಎನ್.ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಪ್ರೊ.ವೆಂಕಟೇಶ್ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ನೂತನ ಅಧ್ಯಕ್ಷರಾಗಿ ಶಮೀನಾ ಜಿ.ಆಳ್ವ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಉದಯಕುಮಾರ್ ಶೆಟ್ಟಿ ಇನ್ನಾ, ಕಾರ್ಯದರ್ಶಿ ಚಂದ್ರಿಕಾ ಭಂಡಾರಿ, ಕೋಶಾಧಿಕಾರಿಯಾಗಿ ಹೆರಿಕ್ ಪಾಯ್ಸ ಚುನಾಯಿತರಾದರು. ಜಂಟಿ ಕಾರ್ಯದರ್ಶಿಯಾಗಿ ಭಾನುಮತಿ ಶೆಟ್ಟಿ ಕಕ್ವಗುತ್ತು ಹಾಗೂ ಮೊಹಮ್ಮದ್ ಹಬೀಬುಲ್ಲಾ ಆಯ್ಕೆಯಾದರು.

ಹಳೇ ವಿದ್ಯಾರ್ಥಿ ಸಂಘದ ಲೆಕ್ಕ ಪತ್ರವನ್ನು ಕೋಶಾಧಿಕಾರಿ ರಾಮಚಂದ್ರ ಉಡುಪ ನೀಡಿದರು. ಸುಮಲತಾ ಸುವರ್ಣ ವಂದಿಸಿದರು, ಮೇಘನಾ ನಿರೂಪಿಸಿದರು.

ಸಾಧಕರಿಗೆ ಗೌರವಾರ್ಪಣೆ

ಹಳೇ ವಿದ್ಯಾರ್ಥಿ ಸಂಘದಿಂದ ನಿವೃತ್ತ ಪ್ರಾಂಶುಪಾಲ ಪ್ರೊ.ಭಾಸ್ಕರನ್ ನಂಬಿಯಾರ್, ಪ್ರೊ.ಸ್ಯಾಮ್ ಮಾಬೆನ್, ಡಾ.ನಾರಾಯಣ ಪೂಜಾರಿ, ಪಮೀದಾ ಬೇಗಂ ಹಾಗೂ ಮೋಹನ್ ರಾವ್ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಸಿಬ್ಬಂದಿ ಜಯಾ ಸಿ.ಪೂಜಾರಿ, ನಾಗೇಶ್ ಕೋಟ್ಯಾನ್ ಹಾಗೂ ಸಾವಿತ್ರಿ ಅವರನ್ನು ಸನ್ಮಾನಿಸಲಾಯಿತು. ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷೆ ಸುಮಲತಾ ಎನ್.ಸುವರ್ಣ, ಗೌರವಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಹಾಗೂ ಮೋಹನ್‌ದಾಸ್ ಹೆಜಮಾಡಿ ಅವರ ಸಮಾಜ ಸೇವೆಗೆ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಪಿಯುಸಿ ವಿಭಾಗದಲ್ಲಿ ರಾಜ್ಯಕ್ಕೆ 5ನೇ ರ‌್ಯಾಂಕ್ ಗಳಿಸಿದ ಪ್ರಿಯಂವೃತ್ ಭಟ್ ಮತ್ತು ಮಂಗಳೂರು ವಿವಿಯಲ್ಲಿ ಬಿಸಿಎಯಲ್ಲಿ 6ನೇ ರ‌್ಯಾಂಕ್ ಗಳಿಸಿದ ಪಲ್ಲವಿ ಭಟ್ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net