

ವಿಜಯವಾಣಿ ಸುದ್ದಿಜಾಲ ಉಡುಪಿ
ಸಂಜೀವಿನಿ ಸಂಘಗಳು ಗ್ರಾಮದ ಪ್ರಗತಿಗೆ ಪ್ರಮುಖ ಕೊಡುಗೆ ನೀಡುತ್ತಿದೆ. ಹಳ್ಳಿಗಳಲ್ಲೂ ಇದೀಗ ಉದ್ಯೋಗ ಲಭಿಸುವಂತಾಗಿದ್ದು, ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಿದೆ ಎಂದು ಸಂಜೀವಿನಿ ಒಕ್ಕೂಟದ ಪ್ರಮುಖರಾದ ಮಾಲತಿ ನಾಯ್ಕ ಸಂತಸ ವ್ಯಕ್ತಪಡಿಸಿದರು.
ಉಡುಪಿ ತಾಲೂಕಿನ 80 ಬಡಗಬೆಟ್ಟು ಗ್ರಾಮ ಪಂಚಾಯಿತಿಯ ಸಭಾಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನೇಸರ ಸಂಜೀವಿನಿ ಒಕ್ಕೂಟದ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಿಡಿಒ ಅಶೋಕಕುಮಾರ್ ಮಾತನಾಡಿ, ಮಹಿಳಾ ಸ್ನೇಹಿ ಗ್ರಾಮ ಪಂಚಾಯಿತಿಯಾಗಿಸಲು ಗ್ರಾಮದ ಎಲ್ಲ ಮಹಿಳೆಯರು ಕೈಜೋಡಿಸಬೇಕು. ಸುಸ್ಥಿರ ಅಭಿವೃದ್ಧಿಯ ಗುರಿ ಸಾಧಿಸಲು ಸಹಕರಿಸಬೇಕು ಎಂದರು.
ಗ್ರಾಪಂ ಅಧ್ಯಕ್ಷ ಕೇಶವ ಕೋಟ್ಯಾನ್, ಉಪಾಧ್ಯಕ್ಷೆ ರೂಪಾ ನಾಯಕ ಮಾತನಾಡಿದರು. ಗ್ರಾಪಂ ಕಾರ್ಯದರ್ಶಿ ಶಕುಂತಲಾ ಶೆಟ್ಟಿ ಹಾಗೂ ಪೊಲೀಸ್ ಠಾಣೆಯ ಅಕ್ಷಯಾ ಅವರು ಮಹಿಳೆಯ ಹಕ್ಕು ಮತ್ತು ರಕ್ಷಣೆ ಕುರಿತು ಮಾಹಿತಿ ನೀಡಿದರು.
ಗ್ರಾಪಂ ಸದಸ್ಯರಾದ ಫ್ಲೋಸಿ ಮಾರ್ಗರೇಟ್ ಫೆರ್ನಾಂಡಿಸ್, ಶಾಂತಾ ನಾಯ್ಕ, ಜ್ಯೋತಿ ಡಿ. ಪ್ರಭು, ಕೆ.ಶಾಂತಾರಾಮ ಶೆಟ್ಟಿ, ಶುಭಕರ ಶೆಟ್ಟಿ, ಶಾಂತಾ ಪೂಜಾರಿ, ಲಕ್ಷ್ಮೀ ಶೆಟ್ಟಿ, ಉಷಾ, ನಿರುಪಮಾ ಎಸ್.ಹೆಗ್ಡೆ ಉಪಸ್ಥಿತರಿದ್ದರು.
ಪಡಿ ಸಂಸ್ಥೆಯ ಜಯವಂತ ರಾವ್, ವಿವೇಕ, ನವೀನ, ಗ್ರಾಪಂ ಸಿಬ್ಬಂದಿ, ಒಕ್ಕೂಟದ ಪದಾಧಿಕಾರಿಗಳು, ಎಂಬಿಕೆ ಹಾಗೂ ಎಲ್ಸಿಆರ್ಪಿಗಳು, ಅಂಗನವಾಡಿ/ಆಶಾ ಕಾರ್ಯಕರ್ತೆಯರು, ಉಡುಪಿಯ ಸಖಿ ಸಮಾಲೋಚಕಿ ನೀತಾ ಕೆ.ಎಸ್. ಪಾಲ್ಗೊಂಡಿದ್ದರು.