ಡೇರಿ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸಿ

Dairy Sabe
ನಡುವಿನಪುರ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಹೊಸಕೋಟೆ ಶಿಬಿರದ ಸಹಾಯಕ ವ್ಯವಸ್ಥಾಪಕ ಕೆ.ಶ್ರೀರಾಮ್, ವಿಸ್ತರಣಾಧಿಕಾರಿಗಳಾದ ಟಿ.ಎಂ.ಆನಂದ್, ರಮೇಶ್, ಕೆ.ಆರ್.ವಿನಯ್ ಕುಮಾರ್, ಪವಿತ್ರಾ, ವಿದ್ಯಾಶ್ರೀ, ಬಮುಲ್‌ನ ಕೃಷಿ ಅಧಿಕಾರಿ ಸೌಮ್ಯಾ ಇದ್ದರು.
Published on

ವಿಜಯವಾಣಿ ಸುದ್ದಿಜಾಲ ನಂದಗುಡಿ
ಸಂಘಕ್ಕೆ ರೈತರು ಗುಣಮಟ್ಟದ ಹಾಲು ಸರಬರಾಜು ಮಾಡಿದಾಗ ಡೇರಿ ಉಳಿಯಲು ಸಾಧ್ಯ. ತಾಲೂಕಿನ ಗಡಿಭಾಗದಲ್ಲಿರುವ ಡೇರಿ ಹಾಲು ಸರಬರಾಜು ಮಾಡಿ, ಲಾಭಾಂಶ ಬರುವಂತೆ ಮಾಡಿದೆ ಎಂದು ನಡುವಿನಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿ.ಮುನಿರಾಜು ತಿಳಿಸಿದರು.
ನಡುವಿನಪುರದಲ್ಲಿ ಹಮ್ಮಿಕೊಂಡಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.
ಹಾಲಿನ ಡೇರಿಗಳು ಅಭಿವೃದ್ಧಿಯಾಗಬೇಕಾದರೆ, ಪಕ್ಷಾತೀತವಾಗಿ ಕೆಲಸ ಮಾಡಬೇಕು. ಸಂಘದ ಆಡಳಿತ ಮಂಡಳಿ ರೈತರ ಸಹಕಾರದಿಂದ 2023-24ನೇ ಸಾಲಿನಲ್ಲಿ 12 ಲಕ್ಷ ರೂ.ಲಾಭಾಂಶ ಬಂದಿದ್ದು, ನಿವ್ವಳ ಲಾಭ 5.50 ಲಕ್ಷ ರೂ. ಬಂದಿದೆ. ರೈತರಿಗೆ ಈ ವರ್ಷ 2.70 ಶೇ.ಬೋನಸ್ ನೀಡಲು ತಿರ್ಮಾನಿಸಲಾಗಿದೆ ಎಂದರು.
ಬಮುಲ್ ಹೊಸಕೋಟೆ ಉಪ ವ್ಯವಸ್ಥಾಪಕ ಶಿವಾಜಿ ನಾಯಕ್ ಮಾತನಾಡಿ, ಸಂಘಗಳು ಉತ್ತಮವಾಗಿ ನಡೆಯಬೇಕಾದರೆ ರೈತರು, ಆಡಳಿತ ಮಂಡಳಿ ಪರಸ್ಪರ ಸಹಕಾರ ಇದ್ದಾಗ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ನಡುವಿನಪುರದಲ್ಲಿ ಪ್ರತಿ ಮನೆಯಲ್ಲೂ ಹೈನುಗಾರಿಕೆಗೆ ಪ್ರಾಮುಖ್ಯತೆ ನೀಡಿ, 1 ಕೋಟಿಗೂ ಹೆಚ್ಚು ಹಾಲು ವಹಿವಾಟು ನಡೆದಿರುವುದರಿಂದ ಉತ್ತಮ ಲಾಭಾಂಶ ಗಳಿಸಲು ಸಾಧ್ಯವಾಗಿದೆ ಎಂದರು.
ತಾಲೂಕಿನಲ್ಲಿ 170 ಡೇರಿಗಳಿದ್ದು, 2023-24ನೇ ಸಾಲಿನ ಇದೇ ಮೊದಲ ಸರ್ವ ಸದಸ್ಯರ ಸಭೆಯಾಗಿದೆ. ತಾಲೂಕಿನಲ್ಲಿ 8,708 ರಾಸುಗಳಿಗೆ ವಿಮೆ ಮಾಡಿಸಿದ್ದು, ವಿವಿಧ ರೋಗಗಳಿಗೆ ತುತ್ತಾಗಿ 19 ರಾಸುಗಳು ಮರಣ ಹೊಂದಿದೆ. ಅಕಾಲಿಕ ಮರಣ ಹೊಂದಿದರೆ ರಾಸುಗಳಿಗೆ 50 ಸಾವಿರ, 1 ವರ್ಷ ಮೇಲ್ಪಟ್ಟ ಕರುಗಳಿಗೆ 18 ಸಾವಿರ, ಎಮ್ಮೆಗಳಿಗೆ 25 ಸಾವಿರ ರೂ.ಗಳ ವಿಮಾ ಮೊತ್ತ ದೊರೆಯಲಿದೆ. ರೈತರು ರಾಸುಗಳಿಗೆ ಮತ್ತು ಎಮ್ಮೆಗಳಿಗೆ ಕಾಯಿಲೆ ಬಂದಾಗ ನುರಿತ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ನೀಡಿದರೆ ಉತ್ತಮ ಎಂದರು.
ಗ್ರಾಪಂ ಸದಸ್ಯ ಎನ್.ಎನ್.ಮಂಜುನಾಥ್, ಉಪಾಧ್ಯಕ್ಷ ವಿ.ಮಂಜುನಾಥ್, ನಿರ್ದೇಶಕರಾದ ಎಂ.ಲಕ್ಷ್ಮೀನಾರಾಯಣ, ಪಿ.ಮಂಜುನಾಥ್, ಎನ್.ಕೆ.ಮುನಿರಾಜು. ಬಿ.ಹರೀಶ್, ಎ.ಅಶ್ವತ್ಥಪ್ಪ, ಕೆ.ನಾರಾಯಣಸ್ವಾಮಿ, ಎನ್.ಶ್ರೀನಿವಾಸ್, ಭಾಗ್ಯಮ್ಮ, ಕೆ.ನಾರಾಯಣಸ್ವಾಮಿ, ಜ್ಯೋತಿ ಎನ್.ಮಂಜುನಾಥ್, ಮಾಜಿ ಅಧ್ಯಕ್ಷ ಎನ್.ಪಿ.ನಾರಾಯಣಸಪ್ಪ, ಬಿ.ಪಿಳ್ಳಪ್ಪ, ಎನ್.ಮುನಿರಾಜು, ವಿ.ಲಕ್ಷ್ಮಣ್, ಸಿಇಒ ಎನ್.ಲೋಕೇಶ್, ಸಹಾಯಕರಾದ ಎನ್.ಎಸ್.ದೀಪಕ್, ಎಸ್.ಜಯಂತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net