

ಕುಮಟಾ: ಉತ್ತರ ಕನ್ನಡ ಜಿಲ್ಲಾ ಭಂಡಾರಿ ಸಮಾಜೋನ್ನತಿ ಸಂಘದ ತಾಲೂಕು ಘಟಕದಿಂದ ವಾರ್ಷಿಕ ಸಾಮೂಹಿಕ ಸತ್ಯನಾರಾಯಣ ಕಥಾ ಪೂಜನ, ಭಜನ ಗಾಯನ ಕಾರ್ಯಕ್ರಮ ಪಟ್ಟಣದ ಶಾಂತಿಕಾಂಬಾ ಸಭಾಭವನದಲ್ಲಿ ಭಾನುವಾರ ಜರುಗಿತು.
ಜಿಲ್ಲಾ ಸಂಘದ ಉಪಾಧ್ಯಕ್ಷ ಕಾಗಾಲ ಚಿದಾನಂದ ಭಂಡಾರಿ ಹಾಗೂ ಹರ್ಷಿತಾ ದಂಪತಿ ಶ್ರೀ ದೇವರ ಪೂಜಾ ಕೈಂಕರ್ಯ ನೆರವೇರಿಸಿದರು.
ಕುಂಬೇಶ್ವರದ ವೇ. ದತ್ತಾತ್ರಯ ಭಟ್ ಧಾರ್ಮಿಕ ಪೂಜಾ ವಿಧಿವಿಧಾನ ನಡೆಸಿಕೊಟ್ಟರು. ಸಮಾಜ ಬಾಂಧವರ ವತಿಯಿಂದ ಭಜನ ಗಾಯನ ಹಾಗೂ ಮಹಿಳೆಯರಿಂದ ಅರಿಶಿನ ಕುಂಕುಮ ಕಾರ್ಯಕ್ರಮ ನಡೆಯಿತು.
ಸಮಾಜದ ಅಧ್ಯಕ್ಷ ಶ್ರೀಧರ ಬೀರಕೋಡಿ, ಕಾರ್ಯದರ್ಶಿ ಅರುಣ ಮಣಕೀಕರ, ಪ್ರಭಾಕರ ಮಣಕೀಕರ, ಮಹೇಶ ದೇಶಭಂಡಾರಿ, ಮಹಿಳಾ ಸಂಘದ ಅಧ್ಯಕ್ಷೆ ಸುಷ್ಮಾ ಗಾಂವಕರ, ಮೀರಾ ಮಣಕೀಕರ, ಗಾಯತ್ರಿ ದೀವಗಿ, ಅಂಕಿತಾ ಗಾಂವ್ಕರ, ಜಯಂತ ಭಂಡಾರಿ, ರಮೇಶ ಭಂಡಾರಿ, ವಿಜಯ ಬೀರಕೋಡಿ,
ಕೇಶವ ದೀವಗಿ, ಅಶೋಕ ಭಂಡಾರಿ, ಸುರೇಶ ಗಾಂವ್ಕರ ಇತರರು ಇದ್ದರು.