ಶ್ರೀ ಪುದಿಯೋದಿ ದೇವಿಯ ವಾರ್ಷಿಕ ಮಹೋತ್ಸವ

25.npk-1
ಶ್ರೀ ಪುದಿಯೋದಿ ದೇವಿ
Published on

ನಾಪೋಕ್ಲು: ಕುಂಜಿಲ ಗ್ರಾಮದ ಅಮ್ಮಂಗೇರಿಯ ಕೋಲೆಯಂಡ ಕುಟುಂಬ ಮತ್ತು ಪುದಿಯೋದಿ ದೇವಿ ಡೆವಲಪ್‌ಮೆಂಟ್ ಟ್ರಸ್ಟ್ ವತಿಯಿಂದ ಶ್ರೀ ಪುದಿಯೋದಿ ದೇವಿಯ ವಾರ್ಷಿಕ ಮಹೋತ್ಸವ ಮಾ.30 ಮತ್ತು 31 ರಂದು ನಡೆಯಲಿದೆ.

30ರಂದು ಬೆಳಗ್ಗೆ 6 ಗಂಟೆಗೆ ಗುರು ಮನೆಯಿಂದ ಬಂಡಾರ ಇಳಿಯುವುದು, ರಾತ್ರಿ 10 ಗಂಟೆಗೆ ಪುಧಿಯೋದಿ ದೇವಿಯ ತೋತ, 10.30ಕ್ಕೆ ಮೇಲೇರಿ ಅಗ್ನಿ ಸ್ಪರ್ಶ, 11 ಗಂಟೆಗೆ ಬೀರದೇವರ ತೋತ, 1 ಗಂಟೆಗೆ ಪುದಿಯೋದಿ ದೇವಿಯ ತೋತ ಬಳಿಕ ಬೀರದೇವರ ಕೋಲ, ಬೀರಳಿ ದೇವಿಯ ಕೋಲ ನಡೆಯಲಿದೆ.

ಮಾ.31ರಂದು ಬೆಳಗ್ಗೆ 6 ಗಂಟೆಗೆ ಶ್ರೀ ಪುದಿಯೋದಿ ದೇವಿಯ ಕೋಲ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net