ಕೊಟ್ಟಾರ ವಿದ್ಯಾ ಸರಸ್ವತಿ ಕ್ಷೇತ್ರದ ವಾರ್ಷಿಕ ಮಹಾಪೂಜೆ ಸಂಪನ್ನ

mng_25feb kottara
ಕೊಟ್ಟಾರ ವಿದ್ಯಾ ಸರಸ್ವತಿ ಕ್ಷೇತ್ರದ ವತಿಯಿಂದ ರಾಘವೇಂದ್ರ ಕುಡುವ, ರಾಘವೇಂದ್ರ ಉಪಾಧ್ಯಾಯರು, ಶಿವಾನಂದ್ ಕೆ, ಪಿಎಂ ಬಾಲಚಂದ್ರ, ನಾಗಮಂಜೀರ ಮತ್ತು ಪ್ರಾಪ್ತಿ ಮೆಂಡನ್ ವರಿಗೆ ತುಳಸಿ ಸನ್ಮಾನ ನೀಡಿ ಗೌರವಿಸಲಾಯಿತು.
Published on

ಮಂಗಳೂರು: ಕೊಟ್ಟಾರ ವಿದ್ಯಾ ಸರಸ್ವತಿ ಕ್ಷೇತ್ರದ ವಾರ್ಷಿಕ ಮಹಾಪೂಜೆ ಸಂಪನ್ನಗೊಂಡಿತು. ಮಹಾಪೂಜೆಯ ಹಿನ್ನೆಲೆಯಲ್ಲಿ ಧರ್ಮ ರಕ್ಷಣಾ ಮೊಗವೀರ ವೇದಿಕೆ ಸಹಯೋಗದಲ್ಲಿ ಭಜನಾ ಕಾರ್ಯಕ್ರಮ, ಸರಸ್ವತಿ ಹೋಮ, ಕಲ್ಲುರ್ಟಿ ಸಾನ್ನಿಧ್ಯದಲ್ಲಿ ಪನಿಯಾರ ಸೇವೆ, ಮರುದಿನ ಧಾರ್ಮಿಕ ಸಭೆ ನಡೆಯಿತು.

ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಪ್ರಧಾನ ಅರ್ಚಕ ಕೆ ವಿ ರಾಘವೇಂದ್ರ ಉಪಾಧ್ಯಾಯ ಕಾರ್ಯಕ್ರಮ ಉದ್ಘಾಟಿಸಿದರು. ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಪ್ರಧಾನ ಅರ್ಚಕ ಶಿವಾನಂದ್ ಕೆ, ವಿಶ್ವ ಹಿಂದು ಪರಿಷತ್ತಿನ ವಿಭಾಗ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಅಧ್ಯಕ್ಷ ಪಿ.ಎಂ ಬಾಲಚಂದ್ರ, ಮಂಗಳೂರು ಸ್ಮಾರ್ಟ್ ಸಿಟಿ ಇಂಜಿನಿಯರ್ ರಾಘವೇಂದ್ರ ಕುಡುವ, ಪ್ರಾಪ್ತಿ ಮೆಂಡನ್, ವಿದುಷಿ ನಾಗಮಂಜರಿ, ಚರಣ್ ಸುವರ್ಣ, ಯೂನಿಯನ್ ಬ್ಯಾಂಕ್ ಅಧಿಕಾರಿಗಳ ಸಂಘದ ಅಧ್ಯಕ್ಷ ಆನಂದ್ ಉಪಸ್ಥಿತರಿದ್ದರು.

ಕೊಟ್ಟಾರ ವಿದ್ಯಾ ಸರಸ್ವತಿ ಕ್ಷೇತ್ರದ ವತಿಯಿಂದ ರಾಘವೇಂದ್ರ ಕುಡುವ, ರಾಘವೇಂದ್ರ ಉಪಾಧ್ಯಾಯರು, ಶಿವಾನಂದ್ ಕೆ, ಪಿಎಂ ಬಾಲಚಂದ್ರ, ನಾಗಮಂಜೀರ ಮತ್ತು ಪ್ರಾಪ್ತಿ ಮೆಂಡನ್ ವರಿಗೆ ತುಳಸಿ ಸನ್ಮಾನ ನೀಡಿ ಗೌರವಿಸಲಾಯಿತು. ಮಾಸ್ಟರ್ ಪ್ರಥಮ್, ಮಾಸ್ಟರ್ ವೇದಾಂತ್, ಪ್ರೇಮ ಬೋಳೂರ್, ಸಾಹಿತಿ ಗುರುಪ್ರಸಾದ್ ಅವರಿಗೆ ಓಂಶ್ರೀ ತುಳಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಯಂಕಾಲ ಹಾಲು ಉಕ್ಕಿಸುವ ಪೂಜೆಯಲಿ ಕಟೀಲು ಕ್ಷೇತ್ರದ ಶ್ರೀ ಕಮಲಾದೇವಿ ಪ್ರಸಾದ್ ಅಸ್ರಣ್ಣ ಅವರ ಉಪಸ್ಥಿತಿಯಲ್ಲಿ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net