

ಕಾಸರಗೋಡು: ಜೀವನ ಶೈಲಿ ರೋಗಗಳ ಆರಂಭಿಕ ಪತ್ತೆ ಮತ್ತು ನಿಯಂತ್ರಣಕ್ಕಾಗಿ, ಕೇರಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಡಿಜಿಟಲ್ ವೇದಿಕೆಯ ಸಹಾಯದಿಂದ ವಾರ್ಷಿಕ ಆರೋಗ್ಯ ಸಮೀಕ್ಷೆಯನ್ನು ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದೆ.
ಚೆರುವತ್ತೂರು ಗ್ರಾಪಂನಲ್ಲಿ ಶಾಸಕ ಎಂ.ರಾಜಗೋಪಾಲನ್ ಸಮೀಕ್ಷೆಗೆ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷೆ ಸಿ.ವಿ.ಪ್ರಮೀಳಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಬಿ.ಸಂತೋಷ್ ಪ್ರಸ್ತಾಪಿಸಿದರು. ಎನ್‌ಸಿಡಿ ನೋಡಲ್ ಅಧಿಕಾರಿ ಡಾ.ಪ್ರಸಾದ್ ಥಾಮಸ್ ಯೋಜನೆಯ ಬಗ್ಗೆ ವಿವರಿಸಿದರು.
ನೀಲೇಶ್ವರ ಬ್ಲಾಕ್ ಪಂಚಾಯಿತಿ ಆರೋಗ್ಯ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ ಕುಮಾರ್ ಕೆ, ಸದಸ್ಯೆ ವಲ್ಲಿ ಕೆ, ಚೆರುವತ್ತೂರು ಗ್ರಾಪಂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ರಮಣಿ, ಸದಸ್ಯೆ ಪಿ.ಪದ್ಮಿನಿ, ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಅಬ್ದುಲ್ ಲತೀಫ್ ಮತ್ತಿಲ್, ಅಪರ ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಎನ್.ಪಿ.ಪ್ರಶಾಂತ್, ತಾಂತ್ರಿಕ ಸಹಾಯಕ ಗ್ರೇಡ್ 2 ಎಂ.ಚಂದ್ರನ್ ಉಪಸ್ಥಿತರಿದ್ದರು.
ಚೆರುವತ್ತೂರು ವಿವಿ ಸ್ಮಾರಕ ಬ್ಲಾಕ್ ಕುಟುಂಬ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಟಿ.ಎ.ರಾಜಮೋಹನ್ ಸ್ವಾಗತಿಸಿದರು. ಆರೋಗ್ಯ ನಿರೀಕ್ಷಕ ಪಿ.ಕೆ.ಮಧು ವಂದಿಸಿದರು. ಗ್ರಾಮ ಪಂಚಾಯಿತಿ, ನಗರಸಭಾಮಟ್ಟದ ಉದ್ಘಾಟನೆ ಜುಲೈ 21ರಿಂದ 27ರವರೆಗೆ ಆಯೋಜಿಸಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ(ಆರೋಗ್ಯ) ಎ.ವಿ.ರಾಮದಾಸ್ ತಿಳಿಸಿದ್ದಾರೆ.