ಶ್ರೀ ಚೀರುಂಬಾ ಸೊಸೈಟಿ ಶೇ.20 ಡಿವಿಡೆಂಡ್ ಘೋಷಣೆ, ಶೀಘ್ರದಲ್ಲೇ ಎರಡು ಹೊಸ ಶಾಖೆ ಆರಂಭ, ಸಂಘದ ಮಹಾಸಭೆಯಲ್ಲಿ ತೀರ್ಮಾನ

churumba
ಶ್ರೀ ಚೀರುಂಬಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 30ನೇ ವಾರ್ಷಿಕ ಮಹಾಸಭೆ ಅಧ್ಯಕ್ಷೆ ಶಾಂತಾ ಆರ್ ಅಧ್ಯಕ್ಷತೆಯಲ್ಲಿ ಜರುಗಿತು. ಉಪಾಧ್ಯಕ್ಷ ಸತ್ಯನಾರಾಯಣ ಕೆ., ನಿರ್ದೇಶಕರಾದ ದುರ್ಗೇಶ್ ಚೆಟ್ಟಿಯಾರ್, ರಾಮು ಎಂ., ಉಪೇಂದ್ರ ಕುಮಾರ್ ಎಂ., ಭಾಸ್ಕರ್ ಮಂಗಲ್ಪಾಡಿ, ಜೀವನ್‌ದಾಸ್, ದಯಾನಂದ, ಸುಜಾತಾ ಶೇಖರ್, ರಾಧಾ ಉಪಸ್ಥಿತರಿದ್ದರು.
Published on

ಮಂಗಳೂರು: ಶ್ರೀ ಚೀರುಂಬಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 30ನೇ ವಾರ್ಷಿಕ ಮಹಾಸಭೆ ಭಾನುವಾರ ನಗರದ ದೇವಾಂಗ ಭವನದಲ್ಲಿ ನಡೆದಿದ್ದು ಸದಸ್ಯರಿಗೆ ಶೇ.20 ಡಿವಿಡೆಂಟ್ ಘೋಷಿಸಲಾಗಿದೆ.

ವಾರ್ಷಿಕ ವರದಿ ಮಂಡಿಸಿದ ಜನರಲ್ ಮ್ಯಾನೇಜರ್ ವಿಜಯ ಕುಮಾರ್, ಸೊಸೈಟಿ 2022-23ನೇ ಸಾಲಿನಲ್ಲಿ 1,20,29,996 ರೂ. ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.20ರಂತೆ ಒಟ್ಟು 39.13 ಲಕ್ಷ ರೂ. ಡಿವಿಡೆಂಡ್ ವಿತರಿಸಲಾಗಿದೆ. ವರದಿ ಸಾಲಿನಲ್ಲಿ 121.77 ಕೋಟಿ ರೂ. ಸಾಲ ವಿತರಿಸಲಾಗಿದೆ. ಮಾರ್ಚ್ ಅಂತ್ಯಕ್ಕೆ 56.57 ಕೋಟಿ ರೂ. ಸದಸ್ಯರ ಹೊರ ಬಾಕಿ ಸಾಲ ಇದೆ. 1.96 ಕೋಟಿ ರೂ. ಪಾಲು ಬಂಡವಾಳ ಹಾಗೂ 68 ಕೋಟಿ ರೂ. ಠೇವಣಿ ಇದೆ. 78 ಕೋಟಿ ರೂ ದುಡಿಯುವ ಬಂಡವಾಳ ಹೊಂದಿದೆ ಎಂದು ವಿವರಿಸಿದರು.

ಸಂಘದ ಉಪಾಧ್ಯಕ್ಷ ಸತ್ಯನಾರಾಯಣ ಕೆ., ನಿರ್ದೇಶಕರಾದ ದುರ್ಗೇಶ್ ಚೆಟ್ಟಿಯಾರ್, ರಾಮು ಎಂ., ಉಪೇಂದ್ರ ಕುಮಾರ್ ಎಂ., ಭಾಸ್ಕರ್ ಮಂಗಲ್ಪಾಡಿ, ಜೀವನ್‌ದಾಸ್, ದಯಾನಂದ, ಸುಜಾತಾ ಶೇಖರ್, ರಾಧಾ ಉಪಸ್ಥಿತರಿದ್ದರು. ನಿರ್ದೇಶಕರಾದ ಸತ್ಯನಾರಾಯಣ ಸ್ವಾಗತಿಸಿದರು. ಭಾಸ್ಕರ ಮಂಗಲ್ಪಾಡಿ ವಂದಿಸಿದರು.

30 ವರ್ಷಗಳಿಂದ ಲಾಭದಲ್ಲಿ

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷೆ ಶಾಂತಾ ಆರ್, ಸಂಘವು 30 ವರ್ಷಗಳಿಂದ ಲಾಭದಾಯಕವಾಗಿ ಮುನ್ನಡೆಯುತ್ತಿದ್ದು, 2022- 23ನೇ ಸಾಲಿನಲ್ಲಿ ಶೇ.100 ಸಾಲ ವಸೂಲಾತಿಯಾಗಿದೆ. ಶೀಘ್ರದಲ್ಲೇ ಸಂಘದ ಎರಡು ಹೊಸ ಶಾಖೆಗಳನ್ನು ತೆರೆಯಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net