ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾಸಭೆ

hbr
Published on

ಹೆಬ್ರಿ: ಹೆಬ್ರಿ ಸಮೀಪದ ಪಾಡಿಗಾರ ವಡ್ಡಮೇಶ್ವರ ಹಾಲು ಉತ್ಪಾದಕರ ಸಹಕಾರಿ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು.

ಸಂಘದ ಅಧ್ಯಕ್ಷ ಶ್ರೀಪಾದ ರೈ ಅಧ್ಯಕ್ಷತೆ ವಹಿಸಿದ್ದರು. ಶ್ವೇತ ನವೀನ್ ವಾರ್ಷಿಕ ವರದಿ ಮಂಡಿಸಿ ಮುಂದಿನ ಕಾರ್ಯ ಯೋಜನೆಗಳ ಮಾಹಿತಿ ನೀಡಿದರು. ಸಂಘದ ಉಪಾಧ್ಯಕ್ಷ ರಾಘವೇಂದ್ರ ನಾಯಕ್, ನಿರ್ದೇಶಕರಾದ ಶಬರೀಶ ಸುವರ್ಣ, ಶೇಖರ ಶೆಟ್ಟಿ, ಮಮಕರ ಶೆಟ್ಟಿ, ಅಚ್ಚುತ್ತ ನಾಯ್ಕ, ಜಗನ್ನಾಥ ಕುಲಾಲ್, ಲಲಿತಾ ಶೆಟ್ಟಿ, ಶಕುಂತಳಾ ಶೆಟ್ಟಿ, ಗುಲಾಬಿ ನಾಯ್ಕ, ಸುಜಾತಾ ಉಪಸ್ಥಿತರಿದ್ದರು.

ಸಂಘಕ್ಕೆ ಅತಿ ಹೆಚ್ಚು ಹಾಲು ನೀಡಿ ಸಹಕರಿಸುತ್ತಿರುವ ನಿರ್ದೇಶಕ ಶಬರೀಶ ಸುವರ್ಣ, ದ.ಕ. ಜಿಲ್ಲಾ ಹಾಲು ಒಕ್ಕೂಟದ ಶೇಖರಣಾ ವಿಭಾಗದ ವ್ಯವಸ್ಥಾಪಕ ಡಾ.ರವಿರಾಜ ಉಡುಪ ಅವರನ್ನು ಸನ್ಮಾನಿಸಲಾಯಿತು. 2024-25ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ 3 ಮಂದಿ ಸದಸ್ಯರಿಗೆ ವಿಶೇಷ ಬಹುಮಾನ ವಿತರಣೆ, ಬೋನಸ್, ಡಿವಿಡೆಂಡ್ ವಿತರಣೆ ನಡೆಯಿತು. ರಾಘವೇಂದ್ರ ನಾಯಕ್ ಸ್ವಾಗತಿಸಿದರು. ಹಾಲು ಪರೀಕ್ಷಕಿ ವಿನೋದ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net