

ನಾಪೋಕ್ಲು: ಇಲ್ಲಿನ ದವಸ ಭಂಡಾರದ 2024- 25ನೇ ಸಾಲಿನ ವಾರ್ಷಿಕ ಮಹಾಸಭೆ ಭಗವತಿ ಕಲ್ಯಾಣ ಮಂಟಪದಲ್ಲಿ ದವಸ ಭಂಡಾರದ ಅಧ್ಯಕ್ಷ ಕಂಗಾಂಡ ಜಾಲಿ ಪೂವಪ್ಪ ಅಧಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
ಸಭೆಯಲ್ಲಿ ದವಸ ಭಂಡಾರ ಅಭಿವೃದ್ಧಿ ಬಗ್ಗೆ ಚರ್ಚಿಸಿ ಒಮ್ಮತದ ನಿರ್ಧಾರಗಳನ್ನು ಕೈಗೊಳ್ಳಲಾಯಿತು ಹಾಗೂ ಲೆಕ್ಕಪತ್ರಗಳನ್ನು ಸಭೆಗೆ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಯಿತು.
ಸಭೆಯಲ್ಲಿ ಉಪಸ್ಥಿತರಿದ್ದ ಉದಯಶಂಕರ್, ಅಶೋಕ, ಅಂಬಿ ಕಾರ್ಯಪ್ಪ, ರಘು ಕರುಂಬಯ್ಯ, ಹಿರಿಯರಾದ ಕಾವೇರಪ್ಪ ಸಂಸ್ಥೆಯ ಶ್ರೇಯೋಭಿವೃದ್ಧಿಯ ಬಗ್ಗೆ ಚರ್ಚಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ದವಸ ಬಂಡಾರದ ಉಪಾಧ್ಯಕ್ಷ ಶಿವಚಳಿಯಂಡ ಕಿಶೋರ್ ಬೋಪಣ್ಣ, ನಿರ್ದೇಶಕರಾದ ಶಿವಚಳಿಯಂಡ ಸುಭಾಷ್ ಸೋಮಯ್ಯ, ರಾಜೇಶ್ ತಮ್ಮಯ್ಯ, ಪಡಿಯಮ್ಮಂಡ ಮನು ಮಹೇಶ್, ಅರೆಯಡ ವಿನೋದ್, ಅಶೋಕ, ಬೊಪ್ಪಂಡ ಕಾಳಪ್ಪ, ಅಜ್ಜೇಟ್ಟೀರ ರಾಣಿ, ಕುಂಬಂಡ ಚಿತ್ರಾ, ಕಾರ್ಯದರ್ಶಿ ಕುಂಬಂಡ ಕೇಶವ ಇದ್ದರು.