

ವಿಜಯವಾಣಿ ಸುದ್ದಿಜಾಲ ಕಟೀಲು
ಕಟೀಲು ನಂದಿನಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಕಟೀಲು ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೆ.ನೀಲಯ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನೀಲಯ ಕೋಟ್ಯಾನ್ ಮಾತನಾಡಿ, ಸಂಸ್ಥೆಯು 2023-24ನೇ ಸಾಲಿನ ವರ್ಷಾಂತ್ಯಕ್ಕೆ ಒಟ್ಟು 13,04,028 ರೂ. ಲಾಭಾಂಶ ದಾಖಲಿಸಿದ್ದು, ಶೇ.10ರಷ್ಟನ್ನು ಡಿವಿಡೆಂಡ್ ರೂಪದಲ್ಲಿ ನೀಡುವುದಾಗಿ ಘೋಷಿಸಿದರು.
ಈ ಸಂದರ್ಭ ಧಾರ್ಮಿಕ- ಸಾಮಾಜಿಕ ಮುಖಂಡ ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ಅಂತಾರಾಷ್ಟ್ರೀಯ ಯೋಗ ಪ್ರತಿಭೆ ಮೇಘಶ್ರೀ ಶೆಟ್ಟಿ, ಪ್ರಗತಿಪರ ಕೃಷಿಕ ಜಗನ್ನಾಥ ಶೆಟ್ಟಿ ಅವರನ್ನು ಸಾಧಕರ ನೆಲೆಯಲ್ಲಿ ಸನ್ಮಾನಿಸಲಾಯಿತು.
ಉಪಾಧ್ಯಕ್ಷೆ ಬಬಿತಾ ಎಂ., ನಿರ್ದೇಶಕರಾದ ಸೀತಾರಾಮ ಬಂಗೇರ, ಹರಿಶ್ಚಂದ್ರ ಶೆಟ್ಟಿ, ಗಣೇಶ್ ಶೆಟ್ಟಿ, ದಿನೇಶ್ ಶೆಟ್ಟಿ, ಜಯ ಡಿ.ಪೂಜಾರಿ, ಲಕ್ಷ್ಮಣ ಶೆಟ್ಟಿ, ಪ್ರೇಮರಾಜ್ ಶೆಟ್ಟಿ, ಗಣೇಶ ಆಚಾರ್ಯ, ಲಲಿತಾ, ಬಿ.ಲತಾ, ಅನಿತಾ ಶೆಟ್ಟಿ, ರತ್ನ, ಸಂಸ್ಥೆ ಕಾನೂನು ಸಲಹೆಗಾರ ಗಿರೀಶ್ ಶೆಟ್ಟಿ ಶಿಬರೂರು ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ ಶೆಟ್ಟಿ ಕೆರಮ ಸ್ವಾಗತಿಸಿದರು. ನಿರ್ದೇಶಕಿ ವೈಲೆಟ್ ಡಿಸೋಜ, ಸಿಬ್ಬಂದಿ ದಿವ್ಯಾ ಡಿ.ಅಮಿನ್, ಲಾವಣ್ಯ ಸನ್ಮಾನ ಪತ್ರ ವಾಚಿಸಿದರು. ನಿರ್ದೇಶಕ ರುಕ್ಮಯ ವಂದಿಸಿದರು. ನಿರ್ದೇಶಕ ಅಮರಪ್ರಸಾದ್ ಶೆಟ್ಟಿ ನಿರೂಪಿಸಿದರು.