

ಬಸವಾಪಟ್ಟಣ: ರೈತರು ಸಂಘದಿಂದ ಪಡೆದ ಸಾಲವನ್ನು ನಿಗದಿತ ಸಮಯಕ್ಕೆ ಮರುಪಾವತಿ ಮಾಡಿ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ. ವೀರಯ್ಯ ತಿಳಿಸಿದರು.
ಸಂಘದ ಆವರಣದಲ್ಲಿ ಗುರುವಾರ ನಡೆದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಸಂಘದಲ್ಲಿ 1144 ಶೇರುದಾರರಿದ್ದು, 4,48,14000 ರೂ. ಬೆಳೆ ಸಾಲ ಸಂಘದಿಂದ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಪಿ. ಸಿರಾಜ್, ನಿರ್ದೇಶಕರಾದ ಬಿ.ಜೆ. ಹಾಲನಗೌಡ, ಎಸ್.ಜಿ. ಸತೀಶ್, ಪಿ.ನೂರ್ ಅಹಮದ್, ಜಿ.ಎಚ್. ಜಯಣ್ಣ, ಬಿ. ಚಂದ್ರಪ್ಪ, ಲೋಕೇಶ್ ನಾಯ್ಕ, ಟಿ.ಎಚ್. ಶಿವಪ್ಪ, ಡಿ. ರತ್ನಮ್ಮ, ಡಿ. ಬಸಮ್ಮ, ಪಿ. ಜಬೀರ್ ಅಹಮದ್ ಇದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಎಲ್. ಪ್ರದೀಪ್ ಸ್ವಾಗತಿಸಿದರು. ಕೆ. ರಾಜಶೇಖರ್ ವಂದಿಸಿದರು.