

ಕುಂದಾಪುರ: 65 ವರ್ಷಗಳ ಇತಿಹಾಸವಿರುವ ಈ ಸಂಘ ಅಭಿವೃದ್ಧಿಯತ್ತ ಸಾಗುತ್ತಿದೆ. ಪಡಿತರ ವಿತರಣೆ ಜವಾಬ್ದಾರಿಯೊಂದಿಗೆ ಬ್ಯಾಂಕಿಂಗ್ ವ್ಯವಹಾರ ಮಾಡುತ್ತಾ ಲಾಭಗಳಿಸುತ್ತಾ ಬಂದಿದೆ. ಕೃಷಿಕರ ಅನುಕೂಲಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದು ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಹೇಳಿದರು.
ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಭಾನುವಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವರದಿ ವರ್ಷಾಂತ್ಯಕ್ಕೆ 8.467 ಸದಸ್ಯರಿದ್ದು, 28,36,935 ಪಾಲು ಬಂಡವಾಳ ಹೊಂದಿದೆ. 21,93,62,177ರೂ. ಠೇವಣಿ ಹೊಂದಿದ್ದು, ವರದಿ ವರ್ಷದಲ್ಲಿ 37,80,459ರೂ. ಲಾಭ ಗಳಿಸಿದ್ದು, ಶೇ.10 ಡಿವಿಡೆಂಡ್ ನೀಡಲಾಗುವುದು ಎಂದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಶೋಭಾ ಕೃಷ್ಣ ವರದಿ ಮಂಡಿಸಿದರು. ನಿರ್ದೇಶಕರಾಗಿದ್ದ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾಗಿ ನಿವೃತ್ತಿ ಹೊಂದಿದ ಅರುಣ್‌ಕುಮಾರ್ ಎಸ್.ವಿ. ಅವರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷರಾದ ಶರತ್ ಕುಮಾರ್ ಶೆಟ್ಟಿ ಬಾಳೆಕೆರೆ, ಎಂ.ಮೋಹನ್‌ದಾಸ್ ಶೆಟ್ಟಿ ಮಲ್ಯಾಡಿ, ಎಸ್.ರಾಜು ಪೂಜಾರಿ, ಕೆ.ಮೋಹನ ಪೂಜಾರಿ, ಆನಂದ ಬಿಲ್ಲವ, ಕೆ.ಭುಜಂಗ ಶೆಟ್ಟಿ, ರವಿ ಗಾಣಿಗ, ಪ್ರಭಾಕರ ಶೆಟ್ಟಿ, ಎನ್.ಜಯರಾಮ ಶೆಟ್ಟಿ. ಕೆ.ಸುಧಾಕರ ಶೆಟ್ಟಿ, ಎಚ್.ದಿನಪಾಲ ಶೆಟ್ಟಿ. ಎಚ್.ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.