

ಹರಿಹರ: ಶ್ರೀಹರ ವಿವಿದೋದ್ದೇಶ ಸಹಕಾರಿ ಸಂಘವು 2023-23ನೇ ಸಾಲಿನಲ್ಲಿ 20.87 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಆಧ್ಯಕ್ಷ ಅಂಗಡಿ ಬಸೆಟ್ಟೆಪ್ಪ ಹೇಳಿದರು.
ನಗರದ ವಿದ್ಯಾನಗರದ ಐರಣಿ ಮಠದಲ್ಲಿ ಭಾನುವಾರ ಸಂಘದ 13ನೇ ಹಾಗೂ 2023-23ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶ್ರೀ ಹರ ವಿವಿದೋದ್ದೇಶ ಸಹಕಾರ ಸಂಘವು 13 ವರ್ಷ ಪೂರ್ಣಗೊಳಿಸಿ 14ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ ಎಂದರು.
2023-24ನೇ ಸಾಲಿನಲ್ಲಿ ರೂ. 20.87.342ರಷ್ಟು ನಿವ್ವಳ ಲಾಭಗಳಿಸಿ ಯಶಸ್ವಿಯತ್ತ ಸಾಗಿದ್ದು, ಸಂಘದಲ್ಲಿ ಒಟ್ಟು 2563 ಸದಸ್ಯರಿದ್ದು, ಇದರಲ್ಲಿ 786 ಸಹ ಸದಸ್ಯರಾಗಿದ್ದಾರೆ ಎಂದರು.
ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, ನಿರ್ದೇಶಕ ಹಾಗೂ ಸದಸ್ಯರಿಗೆ ತ್ಯಾಗದ ಮನೋಭಾವನೆಯಿದ್ದಾಗ ಮಾತ್ರ ಆ ಸಂಘ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಹರ ಸಂಘ ಕಾರ್ಯನಿರ್ವಹಿಸುತ್ತಿದೆ ಎಂದರು.
ಸಮಾಜದ ಹೆಸರಿನಲ್ಲಿ ಸಹಕಾರ ಸಂಘ ಕಟ್ಟುವುದು ಲಾಭ ಗಳಿಸುವುದಕ್ಕಲ್ಲ. ಬದಲಾಗಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಶ್ರೇಯೋಭಿವೃದ್ಧಿಗಾಗಿ ಎಂದರು.
ಸಹಕಾರ ಸಂಘದಿಂದ ತೆಗೆದುಕೊಂಡ ಸಾಲ ಸಮಯದ ಮಿತಿಯಲ್ಲಿ ಕಟ್ಟುವ ಮೂಲಕ ಸಂಘದ ಏಳ್ಗೆಗೆ ಸಹಕರಿಸುವಂತೆ ಹೇಳಿದರು.
ಸಂಘದ ಕಾರ್ಯದರ್ಶಿ ಜಿ.ವಿ. ಲೋಕೇಶ್ ಅವರು 2022 ಮತ್ತು 23ನೇ ಸಾಲಿನ ಲೆಕ್ಕಪತ್ರ ಮಂಡಿಸಿ ಸಭೆ ಒಪ್ಪಿಗೆ ಪಡೆದರು. ಮಾಜಿ ಅಧ್ಯಕ್ಷ ಡಿ.ಜೆ. ಶಿವಾನಂದಪ್ಪ, ಉಪಾಧ್ಯಕ್ಷ ಬಸವರಾಜ್ ಓಂಕಾರಿ, ಪಂಚಮಸಾಲಿ ತಾಲೂಕು ಅಧ್ಯಕ್ಷ ದಿಟೂರು ಶೇಖರಪ್ಪ, ನಿರ್ದೇಶಕ ಪಿ.ಎನ್. ಗೋಪಿ ಮಾತನಾಡಿದರು.
ಸಂಘದ ನಿರ್ದೇಶಕರಾದ ಎಂ. ಗುರುನಾಥ್, ಟಿ.ಎನ್. ನಾಗರಾಜಪ್ಪ, ಎಸ್.ಎಂ. ರವಿ, ಬಿ. ಬಸವಲಿಂಗಪ್ಪ ಗೌಡ, ಎನ್.ಆರ್. ಶಂಕ್ರಪ್ಪ, ಲತಾ ಕೊಟ್ರೇಶ್, ರೂಪ ನಾಗರಾಜ್, ಎಂ. ನಾಗರಾಜ್, ಸಿಬ್ಬಂದಿಗಳಾದ ಹರೀಶ್, ಗೋವಿಂದ ರಾಜ್, ಪಿಗ್ಮಿ ಸಂಗ್ರಾಹಕರಾದ ಕೆ.ಆರ್. ಶಾಂತಪ್ಪ, ಪ್ರದೀಪ್ ಕುಮಾರ್, ಶಿವಶಂಕರ್, ಎಸ್.ಎಚ್. ಬಸವ ಕುಮಾರ್, ಜಿ.ಎನ್. ಉಮೇಶ್, ಬಿ.ಎಸ್. ಮಹೇಶ್ವರಪ್ಪ, ಜಿ. ಸಿದ್ದೇಶ್ವರ, ಪಿ.ಎಚ್. ವಾಮದೇವ, ಎಂ.ಅರುಣ್ ಕುಮಾರ್ ಮತ್ತಿತರರಿದ್ದರು.