

ಬಸವಕಲ್ಯಾಣ: ಉನ್ನತ ಶಿಕ್ಷಣ ಪಡೆದಾಗ ಮಾತ್ರ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಶಿಕ್ಷಣ ಪಡೆದರೆ ಜಗತ್ತನ್ನೇ ಗೆಲ್ಲಬಹುದು ಎಂದು ಬೀದರ್ ವಿಶ್ವವಿದ್ಯಾಲಯ ಕುಲಸಚಿವ ಪರಮೇಶ್ವರ ನಾಯಕ ಹೇಳಿದರು.
ನಗರದ ಐಡಿಯಲ್ ಗ್ಲೋಬಲ್ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟ ಸಮಾರೋಪದಲ್ಲಿ ಮಾತನಾಡಿ, ಮಕ್ಕಳಿಗೆ ಒಳ್ಳೆಯ ಶಿಕ್ಷಣ ಜತೆಗೆ ಸರ್ವಾಂಗೀಣ ವಿಕಾಸಕ್ಕೆ ಪೂರಕವಾದ ಕಾರ್ಯಚಟುವಟಿಕೆಗಳನ್ನು ಐಡಿಯಲ್ ಶಾಲೆಯಲ್ಲಿ ಆಯೋಜಿಸಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಮುಜಾಹಿದ್ ಪಾಶಾ ಖುರೇಷಿ ಮಾತನಾಡಿ, ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ಕ್ರೀಡೆ ಇತರ ಪಠ್ಯೇತರ ಚಟುವಟಿಕೆ ಆಯೋಜಿಸುವ ಮೂಲಕ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದರು.
ಡಾ.ಸದಾನಂದ ಪಾಟೀಲ್, ಪ್ರಮುಖರಾದ ಅರ್ಜುನ ಕನಕ, ಆಕಾಶ ಖಂಡಾಳೆ ಮಾತನಾಡಿದರು. ಪೌರಾಯುಕ್ತ ಮನೋಜಕುಮಾರ ಕಾಂಬಳೆ, ನಗರಸಭೆ ಸದಸ್ಯೆ ಶಾಹೀದಾಬಾನು ಖುರೇಷಿ, ನೀತಾ ಪರಮೇಶ್ವರ, ಬಾಬಾಸಾಹೇಬ್ ಗಡೆ, ಸಂಸ್ಥೆ ಸದಸ್ಯರಾದ ಮುಜಾಹಿದ್ ಉಮರ್ ಖುರೇಷಿ, ಉಮರ್ ಖುರೇಷಿ, ಅಮಿರೊದ್ದೀನ್ ಸೇಠ, ಪ್ರಾಚಾರ್ಯ ಜಿಜೀಶ್ ಜೋಸ್, ಸುಷ್ಮಾ ಭೋಸ್ಲೆ, ಪರಮೇಶ್ವರ ಅಂತಪ್ಪನವರ್, ಸತೀಶ್ ಬೆಳಕಟ್ಟೆ, ಶಿವಕುಮಾರ, ರಹೀಮೊದ್ದೀನ್ ಕಾರಿಗಾರ, ಜಾವೀದ್ ಖಾನ್ ಇತರರಿದ್ದರು. ಉಪ ಪ್ರಾಚಾರ್ಯ ಶ್ರೀಕಾಂತ ತೊಬರೆ ಸ್ವಾಗತಿಸಿದರು. ಮಹ್ಮದ್ ಮಾಜಿದ್ ನಿರೂಪಣೆ ಮಾಡಿದರು. ತಾಜೊದ್ದೀನ್ ವಂದಿಸಿದರು.