

ರಾಯಬಾಗ: ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಟಿ.ಎಸ್.ಒಂಟಗೂಡಿ ಹೇಳಿದರು.
ತಾಲೂಕಿನ ಯಲ್ಪಾರಟ್ಟಿ ಗ್ರಾಮದ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಸದಾ ಪ್ರಯತ್ನಶೀಲರಾಗಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆಯ ವಾರ್ಡ್‌ನ್ ಎಲ್.ಎಂ.ಜಯಗೋನಿ ಮಾತನಾಡಿದರು. ಮುಖ್ಯ ಶಿಕ್ಷಕಿ ಮಾಲಾ ಪಿ., ಶ್ರೀಧರ ಚೌಗಲಾ, ಕೆ.ಎಸ್.ಹುಣಸಿಕಟ್ಟಿ, ಸಿಆರ್‌ಪಿ ಎಲ್.ಎಸ್.ಬಿಸ್ವಾಗರ, ಆರ್.ಎಚ್.ಗುರವ, ಎಚ್.ಪಿ.ನಾವಿ, ಎಸ್.ಸಿ.ಕಾಂಬಳೆ, ಎಸ್.ಎ. ಬರಡಗಿ, ವಿ.ಡಿ.ಬಡಿಗೇರ, ಎನ್.ಬಿ.ಟಕ್ಕಣ್ಣವರ, ಪಿ.ಎಸ್.ದೊಡಮನಿ ಇತರರಿದ್ದರು.