ಆತೂರಿನಲ್ಲಿ ಶ್ರೀ ದುಗಲಾಯಿ ದೈವದ ನೇಮೋತ್ಸವ

New Project (12)
Published on

ಕಡಬ: ಕೊೈಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಅಂಗವಾಗಿ ಗುರುವಾರ ಶ್ರೀ ದುಗಲಾಯಿ ದೈವದ ನೇಮೋತ್ಸವ ನಡೆಯಿತು.

ಬುಧವಾರ ಬೆಳಗ್ಗೆ ಬಾಗಿಲು ತೆರೆಯುವ ಮುಹೂರ್ತ, ಮಹಾಪೂಜೆ ನಡೆಯಿತು. ರಾತ್ರಿ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆಯಲ್ಲಿ ಕಟ್ಟೆಪೂಜೆ, ಕೊಲ ಶಾಲೆಯಿಂದಾಗಿ ನೀಲಮೆ ಶ್ರೀ ಮಹಾವಿಷ್ಣು ದೇವಸ್ಥಾನ, ಕುರೋಳಿಕೆ ಮೂಲಕ ಕುಮಾರಧಾರಾದ ಸುದೆಂಗಳದವರೆಗೆ ಪೇಟೆ ಸವಾರಿ, ಕಟ್ಟೆಪೂಜೆಗಳು, ಗುಳಿಗ ಮತ್ತು ಪಂಜುರ್ಲಿ ದೈವಗಳ ನುಡಿಕಟ್ಟುಗಳು, ಅವಭೃತೋತ್ಸವ ನಡೆದು ರಾತ್ರಿ ದೇವಸ್ಥಾನದಲ್ಲಿ ಧ್ವಜಾವರೋಹಣ, ಮಂತ್ರಾಕ್ಷತೆ ನಡೆಯಿತು.

ಗುರುವಾರ ಬೆಳಗ್ಗೆ ಸಂಪ್ರೋಕ್ಷಣೆ, ದುಗಲಾಯಿ ದೈವದ ನೇಮೋತ್ಸವ, ಅನ್ನಸಂತರ್ಪಣೆ ನಡೆಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೀರಜ್‌ಕುಮಾರ್ ರೈ ಆರುವಾರ ಬಾಳಿಕೆ, ಸದಸ್ಯರಾದ ಯತೀಶ್ ಗುಂಡಿಜೆ, ಸುನೀತ್‌ರಾಜ್ ಶೆಟ್ಟಿ ಆರುವಾರ ಬಾಳಿಕೆ, ಶ್ರೀಧರ ಪೂಜಾರಿ ತುಂಬೆತ್ತಡ್ಕ, ಸಂಜೀವ ಸುದೆಂಗಳ, ಗೋಪಾಲ ನಾಯ್ಕ ಸಿಗೆತ್ತಡಿ, ಸುಜಾತ ಜೆ.ಶೆಟ್ಟಿ ಬಡಿಲ, ಮೀನಾಕ್ಷಿ ಕೆ.ಮುಂಡೈಮಾರು, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಉತ್ಸವ ಸಮಿತಿ ಅಧ್ಯಕ್ಷ ಧರ್ಣಪ್ಪ ಗೌಡ ಕೊರಿಕ್ಕಾರು, ಉಪಾಧ್ಯಕ್ಷರಾದ ಪಾಂಡೇಲುಗುತ್ತು ಚಂದ್ರಹಾಸ ರೈ ಬುಡಲೂರು, ಶೀನಪ್ಪ ಗೌಡ ಪಲ್ಲಡ್ಕ, ರಾಜೀವ ಗೌಡ ಪೊಸಲಕ್ಕೆ, ಮೋಹನದಾಸ್ ಶೆಟ್ಟಿ ಬಡಿಲ, ಮುರಳಿಕೃಷ್ಣ ಬಡಿಲ, ಪ್ರಧಾನ ಕಾರ್ಯದರ್ಶಿ ವಿನೋದ್‌ಕುಮಾರ್ ಪಲ್ಲಡ್ಕ, ಕಾರ್ಯದರ್ಶಿಗಳಾದ ಶಾಂತರಾಮ ಗೌಡ ಬೇಂಗದಪಡ್ಪು, ದಾಮೋದರ ಪುಣ್ಕೆತ್ತಡಿ, ಜ್ಯೋತಿ ಕಲ್ಕಾಡಿ, ಅಭಿವೃದ್ಧಿ ಸಮಿತಿ ಸಲಹೆಗಾರ ಕೇಶವ ಅಮೈ ಕಲಾಯಿಗುತ್ತು, ಅಧ್ಯಕ್ಷ ಶೀನಪ್ಪ ಗೌಡ ವಳಕಡಮ, ಪ್ರಧಾನ ಕಾರ್ಯದರ್ಶಿ ಚೇತನ್ ಆನೆಗುಂಡಿ, ಬೈಲುವಾರು ಸಮಿತಿ ಗ್ರಾಮ ಸಂಚಾಲಕ ಭವಿತ್‌ರಾಜ್ ಪಲ್ಲಡ್ಕ, ಸಹಸಂಚಾಲಕ ಪ್ರವೀಣ್‌ರಾಜ್ ಕೊಲ್ಯ, ವಿವಿಧ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net