

ಶಿರೋಳ: ಸಮಾಜದಲ್ಲಿ ದೇವಸ್ಥಾನಗಳು ಜ್ಞಾನ, ವೈರಾಗ್ಯ, ಭಕ್ತಿಯ ಸಂಗಮವಾಗಿವೆ. ಬಸವಣ್ಣನವರು 12 ಶತಮಾನದಲ್ಲಿ ತಮ್ಮ ವಚನಗಳ ಮೂಲಕ ಜಾತಿ, ವರ್ಗ, ವರ್ಣಭೇದವಿಲ್ಲದೆ ಬದುಕುವ ಮಾರ್ಗವನ್ನು ತಿಳಿಸಿಕೊಟ್ಟರು ಎಂದು ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.
ಗ್ರಾಮದ ಜನತಾ ಕಾಲನಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದ 11ನೇ ವಾರ್ಷಿಕೋತ್ಸವ ಹಾಗೂ ವೀರಭದ್ರದೇವರ ಪಲ್ಲಕ್ಕಿ ಉತ್ಸವ ಮತ್ತು ಸಾಮೂಹಿಕ ವಿವಾಹಗಳ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಶಿರೋಳ ಶಿವಯೋಗಾಶ್ರಮದ ಮಾತೆ ಅಕ್ಕಮಹಾದೇವಿ ಶರಣಮ್ಮನವರು ಮಾತನಾಡಿ, ಶ್ರೀಮಂತ, ಬಡವ ಎನ್ನದೇ ಎಲ್ಲರೂ ಸಾಮರಸ್ಯದಿಂದ ಸಾಮೂಹಿಕ ಮದುವೆಗಳನ್ನು ಮಾಡುತ್ತಿರುವುದು ಬಡವರಿಗೆ ವರದಾನವಾಗಿದೆ ಎಂದರು.
ಮಾಜಿ ಶಾಸಕ ಬಿ.ಆರ್.ಯಾವಗಲ್ ಮಾತನಾಡಿ, ಸಮಾಜದಲ್ಲಿ ಶ್ರೀಮಂತರು ತಮ್ಮ ಮದುವೆಗಳ ಜತೆಗೆ ಬಡವರ ಮದುವೆಗಳನ್ನು ಮಾಡುವ ಮೂಲಕ ಆದರ್ಶವಾಗಿ ಬಾಳಬೇಕು ಎಂದರು.
ಸಮ್ಮುಖ ವಹಿಸಿದ್ದ ಕಿತ್ತಲಿ ಸಿದ್ದರಾಮೇಶ್ವರ ಮಠದ ಮಂಜುನಾಥ ಸ್ವಾಮೀಜಿ, ಅಭಿನವ ಯಚ್ಚರಸ್ವಾಮೀಜಿ, ಜಿ.ಪಂ ಮಾಜಿ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ಟ್ರಸ್ಟ್ ಅಧ್ಯಕ್ಷ ಲೋಕಪ್ಪ ಕರಕಿಕಟ್ಟಿ ಮಾತನಾಡಿದರು.
ವೀರಪುರವಂತರ ಉಪಸ್ಥಿತಿಯಲ್ಲಿ ಪೂರ್ಣಕುಂಭ ಹಾಗೂ ಸಕಲ ವಾದ್ಯ ವೈಭವಗಳೊಂದಿಗೆ ಬೆಳಗ್ಗೆ ನೊತನ ಪಲ್ಲಕ್ಕಿ ಉತ್ಸವ ಹಾಗೂ ಶ್ರೀವೀರಭದ್ರದೇವರ ರಜತ ಮೂರ್ತಿಯ ಮೆರವಣಿಗೆ ಜರುಗಿತು. ಅಪ್ಪಯ್ಯ ಹಿರೇಮಠ, ರುದ್ರಯ್ಯ ಹಿರೇಮಠ, ಪರಯ್ಯ ಹಿರೇಮಠ, ವೀರಯ್ಯ ಹೊಸಮಠ ಅವರ ಪೌರೋಹಿತ್ಯದಲ್ಲಿ 11 ಜೋಡಿಗಳ ಸಾಮೂಹಿಕ ವಿವಾಹ ಜರುಗಿತು.
ಡಿ.ವೈ. ಕಾಡಪ್ಪನವರ, ಲಕ್ಷೀ ಮಾಸರಡ್ಡಿ, ಲಾಲಸಾಬ ಅರಗಂಜಿ, ಬಸಯ್ಯ ಮಠದ, ಸಂಜು ಕಲಾಲ, ದ್ಯಾಮಣ್ಣ ತೆಗ್ಗಿ, ರಾಜು ಕಲಾಲ, ಎಂ.ಬಿ. ಅರಹುಣಸಿ, ವಿ.ಎನ್. ಕೊಳ್ಳಿ, ಈರಣ್ಣ ಕರಕಿಕಟ್ಟಿ, ಪ್ರವೀಣ ಸಂಗಳದಶೆಟ್ಟರ, ಅಕ್ಷಯ ಗಡೆಕಾರ, ಶೇಖರಯ್ಯ ಹಂಚಿನಮಠ, ಶರಣಪ್ಪ ಕಾಡಪ್ಪನವರ, ಶರಣಯ್ಯ ನಾಗಲೋಟಿಮಠ, ನಂದೀಶ ಕರಕೀಕಟ್ಟಿ, ರಾಜೇಸಾಬ ಚಳ್ಳಮರದ ಹಾಗೂ ಜನಪ್ರತಿನಿಧಿಗಳಿಗೆ, ಸಾಧಕರಿಗೆ, ದಾನಿಗಳಿಗೆ, ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.
ರಾಜು ಸುಳ್ಳದ ಅವರಿಂದ ಜರುಗಿದ ರಸಮಂಜರಿ ಕಾರ್ಯಕ್ರಮ ಜನಮನ ಸೆಳೆಯಿತು. ಎಸ್.ವಿ. ಕುಪ್ಪಸ್ತ, ಬಾಪುಗೌಡ್ರ ತಿಮ್ಮನಗೌಡ್ರ, ಸುನೀಲ ಕಳಸದ ಕಾರ್ಯಕ್ರಮ ನಿರ್ವಹಿಸಿದರು.