ಶಿಕ್ಷಕರನ್ನು ಎಂದಿಗೂ ಮರೆಯಬೇಡಿ

navanagar rotary
Published on

ಹುಬ್ಬಳ್ಳಿ: ವಿದ್ಯಾರ್ಥಿಗಳು ಕಲಿಸಿದ ಶಿಕ್ಷಕರು ಹಾಗೂ ಶಾಲೆಯನ್ನು ಎಂದೆಂದಿಗೂ ಮರೆಯಬಾರದು ಎಂದು ಡಾ. ರಶ್ಮಿ ಕುಲಕರ್ಣಿ (ಅಂಗಡಿ) ಹೇಳಿದರು.

ನವನಗರದ ರೋಟರಿ ಆಂಗ್ಲ ಹಾಗೂ ಕನ್ನಡ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಯು ಶಿಕ್ಷಣದಲ್ಲಿ ಆಸಕ್ತಿ, ಛಲ, ಆತ್ಮವಿಶ್ವಾಸವನ್ನು ಬೆಳೆಸಿಕೊಂಡರೆ ಏನನ್ನಾದರೂ ಸಾದಿಸಬಹುದು. ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಪ್ರೀತಿ, ಉತ್ತಮ ಮಾರ್ಗದರ್ಶನ ಹಾಗೂ ಶಿಕ್ಷೆಯನ್ನು ಶಿಕ್ಷಕರು ಕೊಡಬೇಕು ಎಂದರು.

ನವನಗರ ರೋಟರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಬಿ.ಎಸ್. ಪಾಟೀಲ, ಉಪಾಧ್ಯಕ್ಷ ಎಸ್.ವಿ.ಶಿರಗುಪ್ಪಿ, ಕಾರ್ಯದರ್ಶಿ ಆರ್.ಎಚ್. ರಿತ್ತಿ, ಪ್ರಾಚಾರ್ಯು ಡಾ. ವಿಜಯಶ್ರೀ ಕಲಬುರ್ಗಿ, ಇತರರು ಇದ್ದರು.

ಮಂಜುನಾಥ ಕೊಟ್ರಶೆಟ್ಟಿ ನಿರೂಪಿಸಿದರು. ಕುಸುಮಾ ಮಂಟೂರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net