

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ಪ್ರಸ್ತುತ ಸಮಾಜದಲ್ಲಿ ಸೇವೆಯನ್ನು ಕರ್ತವ್ಯ ಎಂದು ಭಾವಿಸಿದರೆ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಡಾ.ಶ್ರೀ.ಬಸವ ರಮಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ದಾಬಸ್‌ಪೇಟೆಯ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದಲ್ಲಿ ಬೆಂಗಳೂರು ರಾಜಾಜಿನಗರದ ಬಸವೇಶ್ವರ ವಾಣಿಜ್ಯ, ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಶೀಲಾದೇವಿ ಎಸ್.ಮಳೀಮಠ ಮಾತನಾಡಿ, ‘ಸ್ವಚ್ಛ ಕಾಯಕದತ್ತ ಯುವ ಜನತೆ ’ಎಂಬ ವಿಶೇಷ ಶೀರ್ಷಿಕೆಯಡಿ ಶಿಬಿರ ಹಮ್ಮಿಕೊಂಡಿದ್ದು, ಸೇವೆ ಮಾಡಲು ಉತ್ಸುಕರಾಗಿದ್ದೇವೆ ಎಂದರು.
ಶಿಬಿರಾರ್ಥಿ ಆರ್.ಅರ್ಚನಾ ಮಾತನಾಡಿ, ಕಾಲೇಜಿನಲ್ಲಿ ಓದು-ಬರಹದಲ್ಲಿ ನಿರತರಾದ ನಮಗೆ ಎನ್‌ಎಸ್‌ಎಸ್ ಶಿಬಿರದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ. ಇದರಿಂದಜೀವನ ಮೌಲ್ಯ ವೃದ್ಧಿಗೊಳ್ಳಲು ಸಹಕಾರಿಯಾಗಿದೆ ಎಂದರು.
ಶಿಬಿರಾಧಿಕಾರಿ ವೈ.ಗಿರೀಶ್, ಪಿ.ಎಚ್.ಗಿರೀಶ್, ಪಿ.ರಮ್ಯಾ, ಮಠದ ವ್ಯವಸ್ಥಾಪಕ ಕೃಷ್ಣ ಆಚಾರ್ಯ ಇದ್ದರು.